ನಿಪ್ಪಾಣಿಯಲ್ಲಿ ಸರ್ಕ್ಯೂಟ್ ಹೌಸ ಕಟ್ಟಡ ಉದ್ಘಾಟನೆ: ಸಮಾರಂಭಕ್ಕೆ ಗೈರಾದ ಜಿಲ್ಲಾ ಉಸ್ತುವಾರಿ ಸಚಿವ

0
43

ನಿಪ್ಪಾಣಿಯಲ್ಲಿ ಸರ್ಕ್ಯೂಟ್ ಹೌಸ ಕಟ್ಟಡ ಉದ್ಘಾಟನೆ: ಸಮಾರಂಭಕ್ಕೆ ಗೈರಾದ ಜಿಲ್ಲಾ ಉಸ್ತುವಾರಿ ಸಚಿವ

ಕನ್ನಡಮ್ಮ ಸುದ್ದಿ-ಚಿಕ್ಕೋಡಿ : ಲೋಕೋಪಯೋಗಿ ಇಲಾಖೆಯಿಂದ ನಿಪ್ಪಾಣಿಯಲ್ಲಿ ನೂತನವಾಗಿ ನಿರ್ಮಿಸಿರುವ ಸರ್ಕ್ಯೂಟ್ ಹೌಸ ಕಟ್ಟಡವನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಗೋವಿಂದ ಕಾರಜೋಳ ಉದ್ಘಾಟಿಸಿದರು .

ಇಂದು ನಡೆದ ಲೋಕೋಪಯೋಗಿ ಇಲಾಖೆಯಿಂದ ನೂತನವಾಗಿ ನಿರ್ಮಾಣವಾದ ಸರ್ಕ್ಯೂಟ್ ಹೌಸ ಕಟ್ಟಡ ,ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಕಟ್ಟಡ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸಿದ ಡಾ. ಬಿ.ಆರ್ ಅಂಬೇಡ್ಕರ್ ಭವನ ಉದ್ಘಾಟನೆ ಸಮಾರಂಭ ಜರುಗಿತು .

ಉದ್ಘಾಟಕರಾಗಿ ಉಪ ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾರ ಗೋವಿಂದ ಕಾರಜೋಳ ಆಗಮಿಸಿದ್ದರು , ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ,ರಾಜ್ಯ ಸಭೆ ಸದಸ್ಯರಾದ ಈರಣ್ಣ ಕಡಾಡಿ , ವಿ.ಪ ಸದಸ್ಯರಾದ ಮಹಾಂತೇಶ ಕವಟಗಿಮಠ , ಲೋಕಸಭಾ ಸದಸ್ಯರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಅದ್ಯಕ್ಷತೆಯನ್ನ ಸಚಿವೆ ಶಶಿಕಲಾ ಜೊಲ್ಲೆ ವಹಿಸಿದ್ದರು .

ಇನ್ನು ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ , ಸಂಸದ ಸುರೇಶ ಅಂಗಡಿ , ಸಚಿವ ಶ್ರೀಮಂತ ಪಾಟೀಲರ ಗೈರು ಹಾಜರಿ ಎದ್ದು ಕಾಣುತ್ತಿತ್ತು .

loading...