ಯಮಕನಮರಡಿ ಪೋಲಿಸರ ದಾಳಿ ಅಪಾರ ಪ್ರಮಾಣದ ಮದ್ಯ ವಶ,ಓರ್ವನ ಬಂಧನ 

0
72

ಯಮಕನಮರಡಿ ಪೋಲಿಸರ ದಾಳಿ ಅಪಾರ ಪ್ರಮಾಣದ ಮದ್ಯ ವಶ,ಓರ್ವನ ಬಂಧನ 

ಕನ್ನಡಮ್ಮ ಸುದ್ದಿ -ಯಮಕನಮರಡಿ :ಗೋವಾ ರಾಜ್ಯದಿಂದ ಕರ್ನಾಟಕದ ನಿಪ್ಪಾಣಿ ಕಡೆಗೆ ಆಕ್ರಮವಾಗಿ ಗೋವಾ ರಾಜ್ಯದ ಮದ್ಯವನ್ನು ಐಸರ್ ಗೂಡ್ಸ್ ವಾಹನದಲ್ಲಿ ಸುಮಾರು 6,22,300 ಬೆಲೆ ಬಾಳುವ ಮದ್ಯವನ್ನು ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಜಿಲ್ಲಾ ಸಿಇಎನ್ ಕ್ರೈಂ ಪೋಲಿಸರು ಯಮಕನಮರಡಿ ಪೋಲಿಸ್ ಹದ್ದಿನಲ್ಲಿ ವಶಪಡಿಸಿಕೊಂಡಿದ್ದಾರೆ.

ಹುಕ್ಕೇರಿ ತಾಲೂಕಿನ ಎನ್‌ಎಚ್4 ರಸ್ತೆ ಮೆಣಗತ್ತಿ ಕ್ರಾಸ್ ಬಳಿ ಒಟ್ಟು 6,22,300 ಬೆಲೆ ಬಾಳುವ 750 ಎಂಎಲ್‌ನ ತುಂಬಿದ 173 ರಟ್ಟಿನ ಬಾಕ್ಸ್‌ಗಳು ಪ್ರತಿಯೊಂದರಲ್ಲಿ ,750 ಎಂಎಲ್‌ನ 12 ಬಾಟಲಿಗಳಿದ್ದು ಒಟ್ಟು 2076 ಹಾಗೂ 750 ಎಂಎಲ್‌ನ ಮದ್ಯ ತುಂಬಿದ ಬಾಟಲಿ ಗಳನ್ನು ಐಸರ್ ಕಂಪನಿಯ ಗೂಡ್ಸ್ ಕ್ಯಾಂಟರ್ ವಾಹನವನ್ನು ಜಪ್ತಿ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ಹೊನಗಾ ಗ್ರಾಮದ ಜನತಾ ಪ್ಲಾಟನ ನಿವಾಸಿ ಶಕೀಲ ಕಾಸೀಮಸಾಬ ಶೇಖ (34) ಬಂಧಿತ ಆರೋಪಿ. ಈ ಕುರಿತು ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...