ಹುಲಿ ಗಣತಿಯಲ್ಲಿ ಗಿನ್ನಿಸ್ ದಾಖಲೆ

0
54

ದೆಹಲಿ

ಭಾರತದಲ್ಲಿ 2018ರಲ್ಲಿ ನಡೆಸಿದ ಹುಲಿ ಗಣತಿ ಗಿನ್ನೆಸ್​ ದಾಖಲೆಗೆ ಸೇರ್ಪಡೆಯಾಗಿದೆ. ವನ್ಯಜೀವಿ ಗಣತಿಗಾಗಿ ಅತಿ ದೊಡ್ಡ ಪ್ರಮಾಣದಲ್ಲಿ ಕ್ಯಾಮರಾ ಟ್ರ್ಯಾಪ್​ ತಾಂತ್ರಿಕತೆ ಬಳಸಿದ ಹೆಗ್ಗಳಿಕೆ ಇದರದ್ದಾಗಿದೆ.

ಭಾರತದಲ್ಲಿ 2018-19ರಲ್ಲಿ ನಡೆಸಿದ ನಾಲ್ಕನೇ ಆವೃತ್ತಿಯ ಮಾಹಿತಿ ಹಾಗೂ ಅದನ್ನು ಕಲೆ ಹಾಕಲು ಬಳಸಿದ ಸಂಪನ್ಮೂಲಗಳ ಆಧಾರದಲ್ಲಿ ಅತ್ಯಂತ ಸಮಗ್ರ ಹುಲಿ ಗಣತಿ ಇದಾಗಿತ್ತು ಎಂದು ಗಿನ್ನೆಸ್​ ದಾಖಲೆ ತಂಡ ತಿಳಿಸಿದೆ.

ಹುಲಿ ಗಣತಿಯನ್ನು 1,21,337 ಕಿ.ಮೀ ವ್ಯಾಪ್ತಿಯಲ್ಲಿ ನಡೆಸಲಾಗಿದ್ದು, ಇದಕ್ಕಾಗಿ 141 ಬೇರೆ ಸ್ಥಳಗಳಲ್ಲಿ 26,838 ಕ್ಯಾಮರಾ ಟ್ರ್ಯಾಪ್​ ಅಳವಡಿಸಲಾಗಿತ್ತು. ಈ ಕ್ಯಾಮರಾ ಟ್ರ್ಯಾಪ್​ಗಳು 34.85 ಲಕ್ಷ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದವು. ಇದರಲ್ಲಿ 76,651 ಹುಲಿ ಚಿತ್ರಗಳೇ ಆಗಿದ್ದವು. ಇದರಲ್ಲಿ 2,461 ವಯಸ್ಕ ಹುಲಿಗಳಾಗಿದ್ದವು. ಹುಲಿಗಳ ಮೇಲಿನ ಪಟ್ಟೆಗಳನ್ನು ಆಧರಿಸಿ ಅವುಗಳನ್ನು ಗುರುತಿಸಲಾಗಿತ್ತು.

 

loading...