ಸತೀಶ ಜಾರಕಿಹೊಳಿ ಲಿಸ್ಟ್ ಕೊಡಲಿ ಅದರ ಪ್ರಕಾರ ಬಂಧಿಸುತ್ತೇವೆ: ಸಚಿವ ಜಾರಕಿಹೊಳಿ

0
485

ಬೆಳಗಾವಿ
ಗೋಕಾನ ಖಾಸಗಿ ವೈದ್ಯ ಡಾ. ಹೊಸಮನಿ ಅವರು ಎರಡು ಲಕ್ಷ ಬಿಲ್ ಮಾಡಿದ್ದಕ್ಕೆ ಗಲಾಟೆಯಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲಿಸ್ಟ್ ಕೊಡಲಿ ಅದರ ಪ್ರಕಾರ ಬಂಧಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಭಾನುವಾರ ಗೋಕಾಕನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಗೋಕಾಕನಲ್ಲಿ ಖಾಸಗಿ ವೈದ್ಯ ಡಾ. ಹೊಸಮನಿ ಮೃತಪಟ್ಟ ವ್ಯಕ್ತಿಗೆ ಎರಡು ಲಕ್ಷ ರು. ಬಿಲ್ ಮಾಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದೇನೆ. ಗೋಕಾನಲ್ಲಿ ಕೆಲ ಖಾಸಗಿ ವೈದ್ಯರು ಅಸೋಸಿಯೇಷನ್ ಮಾಡಿಕೊಂಡು ಜನರನ್ನು ಬ್ಲಾಕ್ ಮಾಡುತ್ತಿದ್ದಾರೆ. ಜನರಿಂದ ಸಾಕಷ್ಟು ದೂರುಗಳು ಬಂದಿದ್ದವು. ಬ್ಲಾಕ್ ಮೇಲ್ ಮಾಡಿದ ಖಾಸಗಿ ವೈದ್ಯರ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದರು.
ಮೃತಪಟ್ಟ ವ್ಯಕ್ತಿಯ ಪ್ರಕರಣಕ್ಕೆ ಸಂಬAಧಿಸಿದAತೆ ಅಲ್ಲಿ ಭೀಮಶಿ ಬರಮಣ್ಣವರ ಇರಲಿಲ್ಲ. ದುರ್ಗಣ್ಣವರ ಇದ್ದ. ರಾಜಕೀಯ ಒತ್ತಡದಿಂದ ಭರಮಣ್ಣವರ ಹೆಸರು ಹೇಳಿದ್ದಾರೆ. ಅಲ್ಲಿ ಭೀಮಶಿ ಇರಲಿಲ್ಲ. ಇದರಲ್ಲಿ ಅಧಿಕಾರಿಗಳು ಮಾಡಿದ್ದು ತಪ್ಪು ಖಾಸಗಿ ವೈದ್ಯ ಹೊಸಮನಿ ಮಾಡಿದ್ದು ತಪ್ಪು. ಮೃತಪಟ್ಟ ವ್ಯಕ್ತಿಗೆ ಎರಡು ಲಕ್ಷ ಬಿಲ್ ಮಾಡಿದ್ದಕ್ಕೆ ಗಲಾಟೆಯಾಗಿದೆ. ಡಾ. ಅಸೋಸಿಯೇಷನ್‌ಗೆ ಮನವಿ ಮಾಡಿಕೊಳ್ಳುತ್ತೇನೆ ಬಡವರ ಬಗ್ಗೆ ಕಾಳಜಿ ತೆಗೆದುಕೊಳ್ಳಿ ಬೇಕಾಬಿಟ್ಟಿ ಹಣ ಸುಲಿಗೆ ಮಾಡುವುದು ಸರಿಯಲ್ಲ ಎಂದರು.
ಕೊರೋನಾ ವೈರಸ್ ಹರಡುವಿಕೆಯ ಚೈನ್ ಬ್ಲಾಕ್ ಮಾಡಲು ಬೆಂಗಳೂರಿನ ಸುತ್ತಮುತ್ತ ಬರುವ ಏಳು ಅಥವಾ ಹತ್ತು ದಿನ ಲಾಕ್‌ಡೌನ್ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಣಯ ತೆಗೆದುಕೊಂಡಿದ್ದಾರೆ. ಸಂಬAಧಪಟ್ಟ ಆಯಾ ತಾಲೂಕಿನ ಅಧಿಕಾರಿಗಳು ಹಾಗೂ ಶಾಸಕರು ನಿರ್ಣಯ ತೆಗೆದುಕೊಂಡು ಲಾಕ್‌ಡೌನ್ ಮಾಡಲು ನಿರ್ಧರಿಸಲಾಗುವುದು ಎಂದರು.
ಕೊರೋನಾ ವೈರಸ್ ಸೋಂಕಿನಿAದ ರಾಜ್ಯದ ಜನರ ಜೀವ ಉಳಿಸುವುದು ಮುಖ್ಯವಾಗಿದೆ. ಗೋಕಾಕ ಜನರು ಕೊರೋನಾ ಮಹಾಮಾರಿಯ ತಡೆಗೆ ಸಲಹೆ ನೀಡಿದ್ದಕ್ಕೆ ಅಭಿನಂದನೆ ತಿಳಿಸಿದರು. ಕಳೆದ ಕೆಲ ತಿಂಗಳಿನಿAದ ಘೋಷಣೆ ಮಾಡಲಾದ ಪೂರ್ಣ ಪ್ರಮಾಣದ ಲಾಕ್‌ಡೌನ್ ಸಂದರ್ಭದಲ್ಲಿ ವಾರ್ಡ್ಗಳಿಗೆ ತರಕಾರಿ ಮಾರಾಟ, ಹಾಲು, ಪತ್ರಿಕೆ ಸರಬರಾಜು ಮಾಡಲು ಸರಕಾರ ಜವಾಬ್ದಾರಿ ತೆಗೆದುಕೊಳ್ಳತ್ತದೆ ಜನರು ರಸ್ತೆಗೆ ಬರದಂತೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.

loading...