ಅದ್ದೂರಿ ಮದುವೆ ಮಾಡಿದವರ ಮೇಲೆ ಬಿತ್ತು ಕೇಸ್ 

0
301

ಅದ್ದೂರಿ ಮದುವೆ ಮಾಡಿದವರ ಮೇಲೆ ಬಿತ್ತು ಕೇಸ್

ಕನ್ನಡಮ್ಮ ಸುದ್ದಿ-ಹುಕ್ಕೇರಿ– ಅದ್ಧೂರಿ ಮದುವೆ ಮಾಡುವ ಮುನ್ನ ಎಚ್ಚರವಹಿಸಬೇಕಾಗಿದೆ.ಎಚ್ಚರ ತಪ್ಪಿ ಅದ್ದೂರಿ ಮದುವೆಗೆ ಮುಂದಾದರೆ ನಿಮ್ಮ ಮೇಲೂ ಬೀಳುತ್ತೆ ಕೇಸ್, ಮಗನ ಅದ್ಧೂರಿ ಮದುವೆ ಮಾಡಿದ್ದ ಬಿಜೆಪಿ ಮುಖಂಡನ ಮೇಲೆ ಎಫ್‌ಐಆರ್ ದಾಖಲಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದಿದೆ .

ಬಸ್ತವಾಡ ಗ್ರಾಮದ ಬಿಜೆಪಿ ಮುಖಂಡ ದಯಾನಂದ ‌ವಂಟಮುರಿ ಮೇಲೆ ಅದ್ದೂರಿ ಮದುವೆ ಮಾಡಿದ ಆರೋಪದ ಹಿನ್ನಲೆ ಎಫ್ಐಆರ್ ದಾಖಲಾಗಿದ್ದು ,
ನಿನ್ನೆ ಕೊವಿಡ್-೧೯ ನಿಯಮಗಳನ್ನು ಗಾಳಿಗೆ ತೂರಿ ಮಗನ ಮದುವೆ ಮಾಡಿದ್ದಾರೆ ಮುಖಂಡ ದಯಾನಂದ ವಂಟಮುರಿ,
ಮದುವೆ ಜೊತೆ ಸಂಜೆ ಗ್ರಾಮದಲ್ಲಿ ವದು-ವರನ ಅದ್ಧೂರಿ ಮೆರವಣಿಗೆ ಮಾಡಿದ್ದಾರೆ .

250 ಕ್ಕೂ ಹೆಚ್ಚು ಜನರನ್ನು ಮದುವೆಯಲ್ಲಿ ಸೇರಿದ್ದು ಹಾಗೂ ಮಾಸ್ಕ್ ಬಳಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊವಿಡ್-೧೯ ನಿಯಮ‌ ಉಲ್ಲಂಘನೆ ಅಡಿ IPC 188, 269, 270, ಎಪಿಡೆಮಿಕ್ ಡಿಸೀಸ್ ಕಾಯ್ದೆ, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ ಪ್ರಕರಣ ದಾಖಲಾಗಿದೆ .ಈ ಕುರಿತು
ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

loading...