ಕೊರೊನ ವಾರಿಯರ್ಸ್‌ ಪತಿಗೆ ಕೊರೊನ ಸೊಂಕು ದೃಡ- ಹುಕ್ಕೇರಿ ಪಟ್ಟಣದಲ್ಲಿ ಹೆಚ್ಚಿದ ಆತಂಕ

0
55

ಕೊರೊನ ವಾರಿಯರ್ಸ್‌ ಪತಿಗೆ ಕೊರೊನ ಸೊಂಕು ದೃಡ- ಹುಕ್ಕೇರಿ ಪಟ್ಟಣದಲ್ಲಿ ಹೆಚ್ಚಿದ ಆತಂಕ

ಕನ್ನಡಮ್ಮ ಸುದ್ದಿ -ಹುಕ್ಕೇರಿ :ಕೊರೋನಾ ವಾರಿಯರ್ಸ ಪತಿಗೆ ಕೊರೋನಾ ಪಾಸಿಟಿವ್ ದೃಡ ಪಟ್ಟಿರುವ ಘಟನೆ ಹುಕ್ಕೇರಿ ಪಟ್ಟಣದ ನಡೆದಿದೆ .
ಹುಕ್ಕೇರಿ ಪಟ್ಟಣದ ಅಂಗನವಾಡಿ ಕಾರ್ಯಕರ್ತೆಯ 65 ವರ್ಷದ ಪತಿಯಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದೆ .

ಅಂಗನವಾಡಿ ಕಾರ್ಯಕರ್ತೆಯ ಪತಿ ಉಸಿರಾಟದ ತೊಂದರೆ ಹಿನ್ನೆಲೆ ಬೆಳಗಾವಿ ಬಿಮ್ಸ ಆಸ್ಪತ್ರೆಗೆ ದಾಖಲಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ .
ಈ ಹಿನ್ನಲೆ ಹುಕ್ಕೇರಿ ಪಟ್ಟಣದ ಸುಣಗಾರ ಗಲ್ಲಿ ಲಾಕ್ ಡೌನ್ ಮಾಡಿದ್ದಾರೆ ಇಲ್ಲಿನ ಅಧಿಕಾರಿಗಳು.
ಪತಿಯಲ್ಲಿ ಕೊರೊನ ಪಾಸಿಟಿವ್ ಬಂದ ಹಿನ್ನಲೆ
ಅಂಗನವಾಡಿ‌ ಕಾರ್ಯಕರ್ತೆಯ ಗಂಟಲು ದ್ರವ ಆರೋಗ್ಯ ಇಲಾಖೆ ಅಧಿಕಾರಿಗಳು ಪರೀಕ್ಷೆಗೆ ರವಾನಿಸಲಾಗಿದೆ .

ಇನ್ನು ಹುಕ್ಕೇರಿ ಪಟ್ಟಣದಲ್ಲಿ ಇಂದು ಕೊರೋನಾ ಪಾಸಿಟವ್ ಬಂದ ಹಿನ್ನೆಲೆ ಹಾಗೂ ಕಳೆದ ವಾರ ಕೊರೊನ ಸೊಂಕಿನಿಂದ ಮಹಿಳೆ ಸಾವಿನಿಂದ ಸ್ಥಳಿಯರಲ್ಲಿ ಕೊರೋನಾ ಆತಂಕ ಹೆಚ್ಚಾಗಿದೆ .

loading...