ಅರ್ಜುಣಗಿಯಲ್ಲಿ ಕಾರ್ಗಿಲ ವಿಜಯೋತ್ಸವ ಆಚರಣೆ

0
24

ಅರ್ಜುಣಗಿಯಲ್ಲಿ ಕಾರ್ಗಿಲ ವಿಜಯೋತ್ಸವ ಆಚರಣೆ

ಕನ್ನಡಮ್ಮ ಸುದ್ದಿ -ವಿಜಯಪುರ:-ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿಯಲ್ಲಿ ರಾಜುಗೌಡ ಫೋಲಿಸ್ ಪಾಟೀಲ್ ಅಭಿಮಾನಿ ಬಳಗದಿಂದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ನಡೆಯಿತು.

ಸೋಮವಾರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಮಾಜಿ ಸೈನಿಕರಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಗ್ರಾಮದ ಮಾಜಿ ಯೋಧರಾದ ಅಲ್ಲಾಬಕ್ಷ ಮಿರ್ಜಿ ಉದಯಕುಮಾರ್ ಹುಕ್ಕೇರಿ ಬಸವರಾಜ ಕಲಭಿಳಗಿ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ರಾಜುಗೌಡ ಪೋಲಿಸ ಪಾಟೀಲ ಶತ್ರುರಾಷ್ಟ್ರ ಸೇನೆಯು ಆಕ್ರಮಿಸಿಕೊಂಡಿದ್ದ ಭಾರತದ ಮುಕುಟ ಮಣಿಯಂತಿರುವ ಕಾರ್ಗಿಲ್ ಪ್ರದೇಶಗಳನ್ನು ನಮ್ಮ ವೀರಯೋಧರು ತಮ್ಮ ಪ್ರಾಣ ಪಣಕಿಟ್ಟು ,ಜೀವ ಬಲಿದಾನ ಮಾಡಿ ಅಪ್ರತಿಮ ಹೋರಾಟದ ಮೂಲಕ ಮರಳಿ ಪಡೆದ ದಿನ ಎಂದು ಕಾರ್ಗಿಲ ವಿಜಯೋತ್ಸವದಲ್ಲಿ ಮಡಿದ ವೀರ ಸೈನಿಕರಿಗೆ ಹಾಗೂ ಯುದ್ಧದಲ್ಲಿ ಹೋರಾಡಿದ ಸೈನಿಕರಿಗೆ ನಮನ ಸಲ್ಲಿಸಿದರು.

ಸಮಾರಂಭದ ದಿವ್ಯಸಾನಿದ್ಯ ಶ್ರೀಶೈಲಯ್ಯ ಮಠ ಬಿ ವ್ಹಿ ಪಾಟೀಲ್ ಸಂಘದ ಅಧ್ಯಕ್ಷರಾದ ರಾಜುಗೌಡ ಪೋಲಿಸ ಪಾಟೀಲ್, ಕುರುಬ ಸಮಾಜದ ಜಿಲ್ಲಾಅಧ್ಯಕ್ಷರಾದ ರಾಜು ಕಂಭಾಗಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಪ್ಪಣ್ಣ ದೇಸಾಯಿ ಹಾಗೂ ಎಸ್ .ಜಿ .ಗುಂಡಿ ,ಲಕ್ಕುಂಡಿ ಭಾಗವಹಿಸಿದರು.

loading...