ಕೊರೊನಾ ಆತಂಕದಲ್ಲಿಯು ಶ್ರೀ ಮಠಕ್ಕೆ ಭಕ್ತರ ಭೇಟಿ: ಅಂತರ ಕಾಯ್ದುಕೊಳ್ಳಲು ಕುರಿ ಕಾಯಲು ಹೊರಟ ಕಾಗಿನೆಲೆಯ ಸ್ವಾಮೀಜಿ

0
38

ಕೊರೊನಾ ಆತಂಕದಲ್ಲಿಯು ಶ್ರೀ ಮಠಕ್ಕೆ ಭಕ್ತರ ಭೇಟಿ: ಅಂತರ ಕಾಯ್ದುಕೊಳ್ಳಲು ಕುರಿ ಕಾಯಲು ಹೊರಟ ಕಾಗಿನೆಲೆಯ ಸ್ವಾಮೀಜಿ

ಕನ್ನಡಮ್ಮ ಸುದ್ದಿ-ಹಾವೇರಿ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದೇವಸ್ಥಾನ ಹಾಗೂ ಮಠ ಮಾನ್ಯಗಳ ಬಾಗಿಲು ಮುಚ್ಚಿಕೊಂಡಿವೆ.ಕೊರೊನ ಆತಂಕದಲ್ಲಿಯು ಮಠಕ್ಕೆ ಭಕ್ತರ ಭೇಟಿ ಹೆಚ್ಚುತ್ತಿರುವ ಹಿನ್ನಲೆ ಭಕ್ತರ ಹಾಗೂ ತಮ್ಮ ಆರೋಗ್ಯದ ಸುರಕ್ಷತೆಗಾಗಿ ಶ್ರೀಗಳೊಬ್ಬರು ಮಠ ಹಾಗೂ ಭಕ್ತರಿಂದ ದೂರ ಉಳಿದು ಕುರಿ ಕಾಯುವ ಕಾಯಕದಲ್ಲಿ ತೊಡಗಿದ್ದಾರೆ‌.

ಹಾವೇರಿ ಜಿಲ್ಲೆಯ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಅವರು ಕಳೆದ ಕೆಲ ದಿನಗಳಿಂದ ಮಠ ತೊರೆದು ಕುರಿಗಳನ್ನ ಕಾಯುತ್ತಿದ್ದಾರೆ.ಶ್ರೀ ಮಠದ ಸುಮಾರು ೫೦೦ ಕುರಿಗಳನ್ನ ಪಾಲನೆಗೆ ಮುಂದಾಗಿ ಮಠದಿಂದ ದೂರ ಉಳಿದಿದ್ದಾರೆ . ಶ್ರೀಗಳು ಮಠದಲ್ಲಿದ್ದರೆ ಭಕ್ತರು ಭೇಟಿ ಹೆಚ್ಚುವ ನಿಟ್ಟಿನಲ್ಲಿ ಮಠದಿಂದ ಶ್ರೀಗಳೆ ದೂರ ಉಳಿದು ಸಾಮಾಜಿಕ ಪ್ರಜ್ಞೆ ಮೆರೆದಿದ್ದಾರೆ .

ಕೊರೊನಾ ಸಂಕಷ್ಟದಲ್ಲಿ ಕಾಗಿನೆಲೆ ಕನಕ ಗುರುಪೀಠ, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಮತ್ತು ಬಳ್ಳಾರಿ ಜಿಲ್ಲೆಯ ಮೈಲಾರದ ಶಾಖಾ ಮಠಗಳಿಗೆ ನಿತ್ಯ ನೂರಾರು ಭಕ್ತರ ಆಗಮಿಸುತ್ತಿದ್ದಾರೆ.

ಭಕ್ತರಿಗೆ ಕೊರೊನಾ ಹೆಚ್ಚಳದಿಂದ ಮಠಕ್ಕೆ ಆಗಮಿಸದಂತೆ ಶ್ರೀಗಳು ಮನವಿ ಮಾಡಿಕೊಂಡರು ಸಹ ಭಕ್ತರು ಆಗಮಿಸುತ್ತಿದ್ದಾರೆ‌. ಇದರಿಂದ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಿ ಕುರಿ ಪಾಲನೆಗೆ
ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಮುಂದಾಗಿದ್ದಾರೆ.

ಮಠಕ್ಕೆ ಸೇರಿದ ಸುಮಾರು ಕುರಿಗಳನ್ನು ಬಳ್ಳಾರಿ ಜಿಲ್ಲೆಯ ಮೈಲಾರ ಅಡವಿಯಲ್ಲಿ ಉಳಿದುಕೊಂಡು ನಿರಂಜನಾನಂದ ಪುರಿ ಸ್ವಾಮೀಜಿ ಕುರಿ ಮೇಯಿಸುತ್ತಿದ್ದು ,ಮಠಕ್ಕೆ ಭಕ್ತರ ಬಾರದಂತೆ ಕುರಿ ಕಾಯುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದು ಇನ್ನುಳಿದ ಮಠಗಳಿಗೆ ಮಾದರಿಯಾಗಿದ್ದಾರೆ .

loading...