ಕೊರೋನಾ ಸೋಂಕಿನಿಂದ ಮುಕ್ತರಾದ ಶಾಸಕ ಬೆನಕೆ

0
20

ಬೆಳಗಾವಿ
15 ದಿನಗಳಿಂದ ಕೊರೊನಾ ಸೋಂಕಿನಿಂದ ಬಳುತ್ತಿದ್ದ ಹಾಗೂ ಕೆ.ಎಲ್.ಇ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಭಾನುವಾರ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಳೆದ 15 ದಿನಗಳ ಹಿಂದೆ ಶಾಸಕ ಅನಿಲ ಬೆನಕೆ ಅವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು .ಮೊದಲೆರಡು ದಿನಗಳವರೆಗೆ ಅವರು ತಮ್ಮ ಮನೆಯಲ್ಲಿಯೇ ಹೊಂ ಕ್ವಾರನಂಟೈನ ಆಗಿದ್ದರು.ತದ ನಂತರ ಹೆಚ್ಚಿನ ಉಪಚಾರಕ್ಕಾಗಿ ಶಾಸಕ ಅನಿಲ ಬೆನಕೆ ಅವರನ್ನು ಕೆ.ಎಲ.ಇ. ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ 15 ದಿನಗಳ ನಿರಂತರ ಚಿಕಿತ್ರೆಯಲ್ಲಿದ್ದ ಶಾಸಕ ಅನಿಲ ಬೆನಕೆ ಅವರು ಸಂಪರ‍್ಣ ಗುಣಮುಖರಾಗಿ ಇಂದು ರವಿವಾರ ಕೆ.ಎಲ್.ಇ.ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಅದಲ್ಲದೇ ತಮಗೆ ಸಕಾಲದಲ್ಲಿ ಮತ್ತು ಅತ್ಯುತ್ತಮ ಉಪಚಾರ ನೀಡಿದ ವೈದ್ಯರನ್ನು ಹಾಗೂ ಆರೈಕೆ ಮಾಡಿದ ದಾದಿಯರನ್ನು ಶಾಸಕ ಅನಿಲ ಬೆನಕೆ ಅವರು ಸನ್ಮಾನಿಸಿ ಗೌರವಿಸಿದ್ದಾರೆ.
ಮುಂದಿನ ಒಂದು ವಾರ ಅಂದರೆ 7 ದಿನಗಳವರೆಗೆ ಮನೆಯಲ್ಲಿಯೇ ಇರುವಂತೆ ವೈದ್ಯರು ಸಲಹೆ ನೀಡಿದ್ದು, ಸರ‍್ವಜನಿಕರು ಸಾಮಾಜಿಕ ಅಂತರ ಪಾಲಿಸಿ ಸದಾ ಸುಚಿತ್ವವನ್ಬು ಕಾಪಾಡಿಕೊಂಡು ತಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕೆಂದು ಶಾಸಕ ಅನಿಲ ಬೆನಕೆ ಅವರು ಮನವಿ ಮಾಡಿಕೊಂಡಿದ್ದಾರೆ.

loading...