ಕ್ಯಾಂಟೀನ್ ಸಿಬ್ಬಂದಿಗೆ ಸೋಂಕು ದೃಢ, ಐಸಿಎಂಆರ್ ಲ್ಯಾಬ್ ಸ್ಥಗಿತ

0
22

ಕ್ಯಾಂಟೀನ್ ಸಿಬ್ಬಂದಿಗೆ ಸೋಂಕು ದೃಢ, ಐಸಿಎಂಆರ್ ಲ್ಯಾಬ್ ಸ್ಥಗಿತ
ಬೆಳಗಾವಿ: ಬೀಮ್ಸ್ ಕ್ಯಾಂಟೀನ್ ಸಿಬ್ಬಂದಿಗೆ ಸೋಂಕು ದೃಢ ಪಟ್ಟಿದ್ದು, ಈ ಸಂದರ್ಭದಲ್ಲಿ ಉಪಾಹಾರ ಸೇವಿಸಿದ ವ್ಯಕ್ತಿಗಳಿಗೆ ಆತಂಕ ಮನೆಮಾಡಿದೆ.
ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿರುವ ಮೂವರು ಮಹಿಳೆಯರಿಗೆ ಸೋಂಕಿನ ಶಂಕೆ ಹಿನ್ನೆಲ್ಲೆಯಲ್ಲಿ ಗಂಟಲು ದ್ರವ ಕಳಿಸಲಾಗಿತ್ತು, ವರದಿ ಆರೋಗ್ಯ ಇಲಾಖೆ ಬುಲೆಟಿನಲ್ಲಿ ಮೂವರಿಗೆ ಸೋಂಕು ತಗಲಿರುವುದು ಮಾಹಿತಿ ಇದೆ. ಇದರಿಂದ ಐಸಿಎಂಆರ್-ಎನ್‌ಐಟಿಎA ಕ್ಯಾಂಪಸ್‌ನಲ್ಲಿರುವ ಐಸಿಎಂಆರ್ ಲ್ಯಾಬ್‌ವನ್ನು ಸ್ಥಗಿತಗೊಳಿಸಲಾಗಿದೆ.
ಮೂವರು ಮಹಿಳೆಯರನ್ನು ಚಿಕಿತ್ಸೆಗಾಗಿ ಕಳಿಸಲಾಗಿದೆ. ಈ ಕ್ಯಾಂಪಸ್‌ನ ೧೩ ಜನರ ಮೇಲೆ ನಿಗಾ ಇಡಲಾಗಿದ್ದು, ಪರೀಕ್ಷೆಗೆ ಕಳಿಸಲಾಗಿದೆ. ಒಟ್ಟಾಗಿ ೧೮೦ ಜನರು ಉಪಾಹಾರ ಸೇವಿಸಿದ ಮಾಹಿತಿ ಇದೆ.
ಮಾದರಿಗಳನ್ನು ಪರೀಕ್ಷಿಸುವ ಲ್ಯಾಬ್ ಸ್ಥಗಿತಗೊಂಡಿದ್ದು, ಸೋಮವಾರದಿಂದ ಪ್ರಾರಂಭಿಸುವ ಸಾಧ್ಯತೆಯಿದೆ.

loading...