ನಾಡ ವಿರೋಧಿ ಸಚಿವ ಶ್ರೀಮಂತ ಪಾಟೀಲರನ್ನ ಗಡಿ ಪಾರು ಮಾಡಿ : ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ

0
174

ನಾಡ ವಿರೋಧಿ ಸಚಿವ ಶ್ರೀಮಂತ ಪಾಟೀಲರನ್ನ ಗಡಿ ಪಾರು ಮಾಡಿ : ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ

ಕನ್ನಡಮ್ಮ ಸುದ್ದಿ-ಸಂಕೇಶ್ವರ: ನಾಡ ವಿರೋಧಿ ಭಾಷಣ ಮಾಡಿದ್ದ ಜವಳಿ ಸಚಿವ ಶ್ರೀಮಂತ ಪಾಟೀಲ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು .

ಇಂದು ಸಂಕೇಶ್ವರ ಪಟ್ಟಣದ ನಾಡ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಕಾರ್ಯಕರ್ತರು ಕಳೆದ ಎರಡು ದಿನದ ಹಿಂದೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ನಡೆದಿದ್ದ ಬಸವೇಶ್ವರ ಸಕ್ಕರೆ ಕಾರ್ಖಾನೆಯ ಭೂಮಿ ಪೂಜೆ ವೇಳೆ ಸಚಿವ ಶ್ರೀಮಂತ ಪಾಟೀಲ ಮರಾಠಿಯಲ್ಲಿ ಭಾಷಣ ಮಾಡಿ ಕರ್ನಾಟಕದ ಆರುವರೆ ಕೋಟಿ ಕನ್ನಡಿಗರ ಸ್ವಾಭಿಮಾನಿ ಕೆಣಕಿದ್ದಾರೆ . ಆದ್ದರಿಂದ ಮರಾಠಿಯಲ್ಲಿ ಭಾಷಣ ಮಾಡಿ ಮರಾಠಿ ಪ್ರೇಮ ಮೆರೆದು ಕನ್ನಡಗರಿಗೆ ಅವಮಾನ ಮಾಡಿರುವ ಸಚಿವ ಶ್ರೀಮಂತ ಪಾಟೀಲ ಅವರನ್ನ ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕು ಹಾಗೂ ಶ್ರೀಮಂತ ಪಾಟೀಲ ಅವರನ್ನ ಗಡಿ ಪಾರು ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಉಪ ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ . ಒಂದು ವೇಳೆ ಶ್ರೀಮಂತ ಪಾಟೀಲ ಅವರನ್ನ ಗಡಿ ಪಾರು ಮಾಡದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು ಯುವ ಘಟಕದ ತಾಲೂಕು ಅದ್ಯಕ್ಷ ವಿನಯಗೌಡ ಪಾಟೀಲ ಎಚ್ಚರಿಕೆ ನೀಡಿದ್ದಾರೆ .

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಮುಖಂಡರಾದ ಸಂತೋಷ ಸಾತನಾಯಿಕ ,ರಾಹುಲ ವಾರಕರಿ ,ಪ್ರೀತಂ ಸುಮಾರೆ, ಉಮೇಶ ಪಾಟೀಲ,ಅಭಿಷೇಕ ಹರಿಜನ,ಗೋಪಿ ವಾರಕರಿ,ಶ‌ಂಕರ ಭೋಸಲೆ ,ಬಸವರಾಜ ಅಕಿವಾಟೆ , ರೋಹಿತ ಮುಲಾಯಿಗೋಳ ಸೇರಿದಂತೆ ಇತರರು ಇದ್ದರು .

loading...