ಕೊರೊನಾ ವಾರಿಯರ್ಸ್‌ ಗಳ ಮೇಲೆ ಹಲ್ಲೆ -ಅವಾಚ್ಯ ಶಬ್ದಗಳಿಂದ ನಿಂದನೆ

0
36

ಕೊರೊನಾ ವಾರಿಯರ್ಸ್‌ ಗಳ ಮೇಲೆ ಹಲ್ಲೆ -ಅವಾಚ್ಯ ಶಬ್ದಗಳಿಂದ ನಿಂದನೆ

ಕನ್ನಡಮ್ಮ ಸುದ್ದಿ -ಹುಕ್ಕೇರಿ -ತಾಲೂಕಿನ ಗಜಪತಿ ಗ್ರಾಮದಲ್ಲಿ ಆರೋಗ್ಯ ಕ್ಯಾಂಪ್ ನಡೆಸಲು ಬಂದಿದ್ದ ಆರೋಗ್ಯ ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಅಮಾನವೀಯ ಘಟನೆ ನಡೆದಿದೆ .

ಗಜಪತಿ ಗ್ರಾಮದಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆ ಗ್ರಾಮದಲ್ಲಿ ಕ್ಯಾಂಪ್ ನಡೆಸಲು ತೆರಳಿದ್ದ ಆರೋಗ್ಯ ಇಲಾಖೆ ಸಹಾಯಕಿ ಶಿವಕ್ಕಾ ಬಂಜಿರಾಮ ಮೇಲೆ ಹಲ್ಲೆ ನಡೆಸಿ ಅವಾಚ್ಚ ಶಬ್ದಗಳಿಂದ ನಿಂದನೆ ಮಾಡಲಾಗಿದೆ .
ಗಜಪತಿ ಗ್ರಾಮದ ಬಾಳಪ್ಪಾ ಅಣ್ಣಪ್ಪಾ ಪಾಟೀಲ ಎಂಬಾತ ನಿಂದ ಹಲ್ಲೆ ನಡೆದಿದೆ .
ಈ ವೇಳೆ ಜಗಳ ಬಿಡಿಸಲು ಬಂದಿದ್ದ ಆಶಾ ಕಾರ್ಯಕರ್ತೆ ಲಕ್ಷ್ಮೀ ಹಾಗೂ ಪಿಡಿಒ ರಮೇಶ್ ತೇಲಿ ಗೂ ಅವಾಚ್ಚ ಶಬ್ದಗಳಿಂದ ನಿಂದನೆ ಮಾಡಲಾಗಿದೆ .
ಸ್ಥಳಕ್ಕೆ ಯಮಕನಮರಡಿ ಪೊಲೀಸರ ಭೇಟಿ ನೀಡಿ ಪರೀಶಿಲನೆ ನಡೆಸಿದ್ದು ,ಹಲ್ಲೆ ನಡೆಸಿ ಆರೋಪಿ ಬಾಳಪ್ಪಾ ಪಾಟೀಲ ಪರಾರಿಯಾಗಿದ್ದಾನೆ .

ಈ ಘಟನೆಯ ಬಗ್ಗೆ ಸಾರ್ವಜನಿಕರು ಹಲ್ಲೆಕೊರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು , ನಾಳೆ ಹುಕ್ಕೇರಿ ತಹಶಿಲ್ದಾರ ಕಚೇರಿ ಎದುರು ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ .

loading...