ಖಾಲಿ ಸ್ಟ್ಯಾಂಡ್ ಗಳು ಕ್ರಿಕೆಟ್ ನ ಗುಣಮಟ್ಟದ ಮೇಲೆ ಪರಿಣಾಮ ಬೀರದು

0
6

ನವದೆಹಲಿ:-ಖಾಲಿ ಸ್ಟ್ಯಾಂಡ್ ಗಳಿಂದ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಗುಣಮಟ್ಟದ ಕ್ರಿಕೆಟ್ ಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಮಾರ್ಗದರ್ಶಕ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.
13ನೇ ಆವೃತ್ತಿಯು ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದ್ದು, ಲೀಗ್ ನ ಆರಂಭಿಕ ಪಂದ್ಯಗಳು ಮುಚ್ಚಿದ ಬಾಗಿಲ ಹಿಂದೆ ಜರುಗಲಿವೆ.
” ಮೈದಾನದಲ್ಲಿ ಯಾವುದೇ ಜನಸಂದಣಿ ಅಥವಾ ಯಾವುದೇ ಪ್ರೇಕ್ಷಕರು ಇರದಿದ್ದರೂ ಅವರು ನಿಜವಾಗಿಯೂ ಸ್ಪರ್ಧೆಯನ್ನು ಆನಂದಿಸುತ್ತಾರೆ ಎಂದು ಆಟದ ಎಲ್ಲ ಅಭಿಮಾನಿಗಳಿಗೆ ನಾನು ಭರವಸೆ ನೀಡಬಲ್ಲೆ. ಕ್ರಿಕೆಟ್‌ನ ಶಕ್ತಿ ಅಥವಾ ಗುಣಮಟ್ಟ ಕುಸಿಯುತ್ತದೆ ಎಂದು ಎಂದಿಗೂ ಯೋಚಿಸಬೇಡಿ,” ಎಂದು ಸನ್‌ ರೈಸರ್ಸ್ ಹೈದರಾಬಾದ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಲಕ್ಷ್ಮಣ್ ಹೇಳಿದ್ದಾರೆ.
2020ರ ಐಪಿಎಲ್ ನಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡುವ ಕುರಿತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯನ್ನು ಸುದ್ದಿ ಸಂಸ್ಥೆ ಸಂಪರ್ಕಿಸಿದಾಗ ಅಲ್ಲಿನ ಕ್ರಿಕೆಟ್ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮುಬಾಶೀರ್ ಉಸ್ಮಾನಿ, ”ಆತಿಥೇಯರಾಗಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ಪ್ರೇಕ್ಷಕರ ಹಾಜರಾತಿ ಒಳಗೊಂಡಂತೆ ಯಾವೆಲ್ಲ ನಿಯಮಗಳನ್ನು ಅನುಸರಿಸಬೇಕು ಎಂಬುದರ ಕುರಿತು ಅನುಮೋದನೆ ಪಡೆಯಲು ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರೇಕ್ಷಕರ ಅವಶ್ಯಕತೆಗಳನ್ನು ನಿರ್ಣಯಿಸಲು ನಾವು ಬಿಸಿಸಿಐ ಜತೆ ಚರ್ಚಿಸಲಿದ್ದೇವೆ,” ಎಂದು ಹೇಳಿದ್ದಾರೆ.

loading...