ಸತೀಶ ಫೌಂಡೇಶನ್ ವತಿಯಿಂದ ಉಚಿತ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ : ಸೊಂಕಿತರು ಇದರ ಸದುಪಯೋಗ ಪಡೆದುಕೊಳ್ಳಿ- ರಜಪೂತ

0
86

ಸತೀಶ  ಫೌಂಡೇಶನ್ ವತಿಯಿಂದ ಉಚಿತ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ : ಸೊಂಕಿತರು ಇದರ ಸದುಪಯೋಗ ಪಡೆದುಕೊಳ್ಳಿ- ರಜಪೂತ

ಕನ್ನಡಮ್ಮ ಸುದ್ದಿ -ಯಮಕನಮರಡಿ :ಕ್ಷೇತ್ರದ ಕೊರೊನ ಸೊಂಕಿತರಿಗೆ ಆಕ್ಸಿಜನ್ ಕೊರತೆಯಾಗದೆ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ,ಕೊರೊನ ಚಿಕಿತ್ಸೆಯನ್ನ ಮನೆಯಲ್ಲಿ ಪಡೆಯುತ್ತಿರುವವರಿಗೆ ಯಮಕನಮರಡಿ ಕ್ಷೇತ್ರ ವ್ಯಾಪ್ತಿ ಸುಮಾರು ೫೦ ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆಯನ್ನ ಸತೀಶ  ಫೌಂಡೇಶನ್ ತಂಡ ಮಾಡಿದ್ದು ಇದರ ಸದುಪಯೋಗವನ್ನು ಕ್ಷೇತ್ರದ ಜನರು ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಯುವ ಧುರೀಣ ಕಿರಣಸಿಂಗ್ ರಜಪೂತ ತಿಳಿಸಿದ್ದಾರೆ .

ಇಂದು ಯಮಕನಮರಡಿ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು ಯಮಕನಮರಡಿ ಕ್ಷೇತ್ರದ ಶಾಸಕರು ಕೆಪಿಸಿಸಿ ಕಾರ್ಯಾದ್ಯಕ್ಷರಾದ ಸತೀಶ ಜಾರಕಿಹೋಳಿ ಅವರ ಮಾರ್ಗದರ್ಶನಲ್ಲಿ ಸತೀಶ ಫೌಂಡೇಶನ್ ವತಿಯಿಂದ ಕ್ಷೇತ್ರದ ಕೊರೊನ ಸೊಂಕಿತರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆಯನ್ನ ಮಾಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು.ಕ್ಷೇತ್ರದಲ್ಲಿ ಕೊರೊನ ಸೊಂಕಿತರು ಖಾಸಗಿ ಆಸ್ಪತ್ರೆ ದುಬಾರಿ ವೆಚ್ವಕ್ಕೆ ಹೆದರಿ ಹಾಗೂ ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಈ ಆಕ್ಸಿಜನ್ ಸಿಲಿಂಡರ್ ಒದಗಿಸಲಾಗುವುದು ಎಂದರು .

ಒಟ್ಟು ಐವತ್ತು ಆಕ್ಸಿಜನ್ ಸಿಲಿಂಡರ್ ಪೈಕಿ ಯಮಕನಮರಡಿ ಆರೋಗ್ಯ ಕೆಂದ್ರ ಐದು ,ಹಾಗೂ ಹೆಬ್ಬಾಳ ,ಪಾಶ್ಚಾಪುರ ಸೇರಿದಂತೆ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲ ವ್ಯಾಪ್ತಿಯಲ್ಲಿ ಈ ಸೌಲಭ್ಯ ಒದಗಿಸಲಾಗಿದೆ. ಬಡ ಜನರಿಗೆ ಈ ಆಕ್ಸಿಜನ್ ಸಿಲಿಂಡರ್ ಬಹಳಷ್ಟು ಅನುಕೂಲವಾಗಲಿದ್ದು , ಬಹುಶಃ ರಾಜ್ಯದಲ್ಲಿ ಜನರಿಗೆ ಆಕ್ಸಿಜನ್ ಸಿಲಿಂಡರ್ ಒದಗಿಸಿ ಸೊಂಕಿತರ ಬೆನ್ನಿಗೆ ನಿಂತಿರುವ ಏಕೈಕ ಶಾಸಕರು ಸತೀಶ ಜಾರಕಿಹೋಳಿ ಎಂದರೆ ತಪ್ಪಾಗಲಾರದು ‌ಎಂದರು .

ಈ ಸಂದರ್ಭದಲ್ಲಿ ಸತೀಶ ಫೌಂಡೇಶನ್ ದ ಪ್ರಮುಖರಾದ ರಿಯಾಜ್ ಚೌಗಲಾ , ಮುಖಂಡರಾದ ವೀರಣ್ಣ ಬಿಸಿರೋಟ್ಟಿ , ದೇವಪ್ಪ ಹುನ್ನೂರ ,ಶಿವಶಂಕರ ಜುಟ್ಟಿ ,ಗಿರೀಶ ಮಿಶ್ರಕೋಟಿ ಸೇರಿದಂತೆ ಇತರರು ಇದ್ದರು .

loading...