ಆಳವಾದ ಕೋಮಾದಲ್ಲಿ ಪ್ರಣಬ್ ಮುಖರ್ಜಿ

0
62

ನವದೆಹಲಿ:- ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆಳವಾದ ಕೋಮಾದಲ್ಲಿಯೇ ಇದ್ದು, ವೆಂಟಿಲೇಟರ್ ವ್ಯವಸ್ಥೆ ಮುಂದುವರಿಸಲಾಗಿದೆ ಎಂದು ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆ ಗುರುವಾರ ತಿಳಿಸಿದೆ.
ಮೂತ್ರಪಿಂಡದ ಸಮಸ್ಯೆ ಮತ್ತು ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಮಾ ಮತ್ತು ವೆಂಟಿಲೇಟರ್ ಬೆಂಬಲದಲ್ಲಿ ಮುಂದುವರೆದಿದ್ದಾರೆ ಎಂದು ಅವರ ಆರೋಗ್ಯದ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಕಾಂಗ್ರೆಸ್ ಹಿರಿಯ ನಾಯಕನ ಆರೋಗ್ಯವನ್ನು ತೀವ್ರ ನಿಗಾ ತಜ್ಞರ ತಂಡವು ನಿಕಟವಾಗಿ ಗಮನಿಸುತ್ತಿದೆ. ಅವರನ್ನು ಆಗಸ್ಟ್ 10 ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ರಕ್ತ ಹೆಪ್ಪುಗಟ್ಟುವಿಕೆಯ ಕಾರಣ ತುರ್ತು ಜೀವ ಉಳಿಸುವ ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಇದೇ ವೇಳೆ ಅವರಲ್ಲಿ ಕೋವಿಡ್ 19 ಸೋಂಕು ಕೂಡ ದೃಢಪಟ್ಟಿದೆ.

loading...