ಮಗುವಿನ ನಿರೀಕ್ಷೆಯಲ್ಲಿ ಕೊಹ್ಲಿ ದಂಪತಿ

0
18

ನವದೆಹಲಿ:ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೊದಲ ಮಗುವಿನ ನಿರೀಕ್ಷೆಯ ಸಂಭ್ರಮದಲ್ಲಿದ್ದಾರೆ. 2021ರ ಜನವರಿಯಲ್ಲಿ ಮಗುವಿನ ನಿರೀಕ್ಷೆಯಿದೆ ಎಂದು ಕೊಹ್ಲಿ ಮತ್ತು ಅನುಷ್ಕಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಅಕೌಂಟ್‌ನಲ್ಲಿ ಕೊಹ್ಲಿ ಮತ್ತು ಅನುಷ್ಕಾ ಇಬ್ಬರೂ ಒಂದೇ ರೀತಿಯ ಚಿತ್ರ-ಶೀರ್ಷಿಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ 2017ರ ಡಿಸೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಾಗಿ 3 ವರ್ಷಗಳ ಬಳಿಕ ಕೊಹ್ಲಿ ದಂಪತಿ, ತಾವು ಅಪ್ಪ-ಅಮ್ಮನಾಗುತ್ತಿರುವ ಸಂಗತಿ ಬಹಿರಂಗಪಡಿಸಿದ್ದಾರೆ. ‘ನಾವೀಗ ಇಬ್ಬರಿಂದ ಮೂವರಾಗುತ್ತಿದ್ದೇವೆ. 2021ರ ಜನವರಿಗೆ ಹೊಸ ಸದಸ್ಯರೊಬ್ಬರು ಆಗಮನದ ನಿರೀಕ್ಷೆಯಿದೆ’ ಎಂದು ಇಬ್ಬರೂ ಒಂದೇ ರೀತಿಯಾಗಿ ಬರೆದುಕೊಂಡಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳು ಕೊಹ್ಲಿ ಹಾಗೂ ಅನುಷ್ಕಾ ಜೋಡಿಗೆ ಶುಭಾಶಯಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಇನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ತನ್ನ ಅಧಿಕೃತ ಖಾತೆಯಲ್ಲಿ ವಿರಾಟ್ ದಂಪತಿಗೆ ಶುಭಾಶಯ ಕೋರಿದೆ. ವಿರಾಟ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಟ್ವೀಟ್‌ಅನ್ನು ರೀಟ್ವೀಟ್ ಮಾಡಿರುವ ಬಿಸಿಸಿಐ ಅಭಿನಂದನೆಗಳು ಎಂದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಟ್ವಿಟ್ಟರ್ ಖಾತೆಗಳನ್ನು ಉಲ್ಲೇಖಿಸಿದೆ.

ಬಿಸಿಸಿಐ ಅಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಸೇರಿದಂತೆ ತಂಡದ ಭಾರತ ತಂಡದ ಆಟಗಾರರು ಹಾಗೂ ಮಾಜಿ ಆಟಗಾರರು ಮತ್ತು ಅಭಿಮಾನಿಗಳು ಶುಭ ಕೋರಿದ್ದಾರೆ.

loading...