ಮಹಿಳೆಯರ ಮಾರಾಟ ತಡೆಯಲು ಸಂಘಟಿತ ಪ್ರಯತ್ನ ಅಗತ್ಯ :ಬಸವರಾಜ ವರವಟ್ಟಿ ಅಭಿಪ್ರಾಯ

0
21

ಮಹಿಳೆಯರ ಮಾರಾಟ ತಡೆಯಲು ಸಂಘಟಿತ ಪ್ರಯತ್ನ ಅಗತ್ಯ :ಬಸವರಾಜ ವರವಟ್ಟಿ ಅಭಿಪ್ರಾಯ

ಕನ್ನಡಮ್ಮ ಸುದ್ದಿ:ಹುಕ್ಕೇರಿ – ಮಹಿಳೆಯರ ಮತ್ತು ಮಕ್ಕಳ ಮಾರಾಟದಂತಹ ಗಂಭೀರ ಸಮಸ್ಯೆಯನ್ನು ಪರಿಹರಸಲು ಸರಕಾರದ ಕಾರ್ಯಕ್ರಮಗಳ ಜೊತೆಗೆ ಸಮುದಾಯದ ಜನರ ಸಹಭಾಗಿತ್ವ ಅಗತ್ಯವಾಗಿದ್ದು , ಪ್ರಕರಣಗಳನ್ನು ಬೆಳೆಕಿಗೆ ತರಲು ಯಾವುದೇ ಆತಂಕಕ್ಕೆ ಒಳಗಾಗದೆ ಜನರು ಬಾಲ್ಯವಿವಾಹ ಹಾಗೂ ಸಾಗಾಣಿಕೆ ನಡೆದಾಗ ಸ್ವಯಂ ಪ್ರೇರಿತರಾಗಿ ದೂರು ನೀಡಿ ಕೈಜೋಡಿಸಬೇಕು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜ ವರವಟ್ಟಿ ಅಭಿಪ್ರಾಯಪಟ್ಟರು.

ಶುಕ್ರವಾರ ತಾಲೂಕಿನ ಯಲ್ಲಾಪೂರ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದಲ್ಲಿ ಮೈ ಚಾಯ್ಸ್ ಫೌಂಡೇಶನ ಹೈದರಾಬಾದ ಅವರು ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮಲ್ಲಿರುವ ಬಡತನ, ಅಜ್ಞಾನದಿಂದಾಗಿ ಕೆಲ ಸಾಮಾಜಿಕ ಸಮಸ್ಯೆಗಳು ಇನ್ನೂ ನಮ್ಮ ಸಮಾಜವನ್ನು ಕಾಡುತ್ತಿವೆ. ಸರಕಾರ ಇಂತಹ ಸಮಸ್ಯೆಗಳಲ್ಲಿ ನೊಂದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸ್ವಧಾರ, ಸಾಂತ್ವನ, ಮಹಿಳಾ ಸಹಾಯವಾಣಿ, ಮಕ್ಕಳ ಸಹಾಯವಾಣಿ ಮತ್ತೀತರ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ಕರೋನಾ ಸಂದರ್ಭದಲ್ಲಿ ಇಲಾಖೆಯಿಂದ ಮನೆ ಮನೆಗೆ ವಿತರಿಸಲಾಗುತ್ತಿರುವ ಧವಸ ಧಾನ್ಯಗಳ ಬಗ್ಗೆ ಮಾಹಿತಿ ನೀಡಿ ಮಾತೃವಂದನ ಯೋಜನೆಯಡಿ ಗರ್ಭಿಣಿ ಮಹಿಳೆಯರು ಲಾಭ ಪಡೆದುಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಲ್ಲಾ ನಿರೂಪಣಾಧಿಕಾರಿ ನವೀನಕುಮಾರ, ಮಹಿಳಾ ಮತ್ತು ಮಕ್ಕಳ ಅಬಿವೃಧ್ಧಿ ಅಧಿಕಾರಿ ಮೂರ್ತಿ, ಸಂಸ್ಥೆಯ ಸಂಯೋಜಕ ಎಂ.ಎಸ್.ಚೌಗಲಾ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ತಾಲೂಕಿನಿಂದ 30 ಕ್ಕೂ ಹೆಚ್ಚು ಕರೆಗಳಿಗೆ ಅವರು ಉತ್ತರಿಸಿದರು.

loading...