ಮೊದಲ ರೋ ರೋ ರೈಲು ಸೇವೆಗೆ ಮುಖ್ಯಮಂತ್ರಿ ಚಾಲನೆ

0
11

ಬೆಂಗಳೂರು:- ಬೆಂಗಳೂರು ನಗರದಿಂದ ಹೊರಡುವ ಮೊದಲ ರೋ ರೋ ಸೇವೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭಾನುವಾರ ಚಾಲನೆ ನೀಡಿದ್ದಾರೆ.
ಬೆಂಗಳೂರು ಹೊರವಲಯದ ನೆಲಮಂಗಲ ಮತ್ತು ಸೊಲ್ಹಾಪುರ ಸಮೀಪದ ಬೇಲ್ ನಡುವಿನ ರೈಲು ಸೇವೆ ಇದಾಗಿದೆ.ರೈಲ್ವೆ ಸಚಿವಾಲಯ ಏಪ್ರಿಲ್ ನಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ರೋ ರೋ ಸೇವೆಯನ್ನು ಆರಂಭಿಸಲು ಒಪ್ಪಿಗೆ ನೀಡಿತ್ತು. ಬಿ. ಎಸ್. ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಸೇವೆಗೆ ಚಾಲನೆ ನೀಡಿದರು.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಕಂದಾಯ ಸಚಿವ ಆರ್ ಆಶೋಕ್ ಸೇರಿದಂತೆ ಹಲವು ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೈಋತ್ಯ ರೈಲ್ವೆಯು ಆರಂಭಿಸಿರುವ ಮೊದಲ ರೋ ರೋ ಸೇವೆ ಇದಾಗಿದೆ.

loading...