ಸಿಪಿಎಲ್: ಟ್ರಿನ್‌ಬಾಗೊ, ಗಾಯಾನಾಗೆ ಜಯ

0
24

ಟರೂಬಾ:- ಸ್ಟಾರ್ ಆಟಗಾರ ಕಾಲಿನ್ ಮುನ್ರೊ ಬಾರಿಸಿದ ಅರ್ಧಶತಕದ ನೆರವಿನಿಂದ ಟ್ರಿನ್‌ಬಾಗೊ ನೈಟ್ ರೈಡರ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಜಮೈಕಾ ತಲ್ಲವಾಸ್ ವಿರುದ್ಧ 19 ರನ್ ಗಳ ಜಯ ಸಾಧಿಸಿತು. ಆಡಿದ ಏಳು ಪಂದ್ಯಗಳನ್ನು ಗೆದ್ದ ಟ್ರಿನ್‌ಬಾಗೊ ನೈಟ್ ರೈಡರ್ಸ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಮೊದಲು ಬ್ಯಾಟ್ ಮಾಡಿದ ಟ್ರಿನ್‌ಬಾಗೊ 20 ಓವರ್ ಗಳಲ್ಲಿ 4 ವಿಕೆಟ್ ಗೆ 184 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಜಮೈಕಾ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿದರು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟ್ರಿನ್‌ಬಾಗೊ ತಂಡದ ಸುನಿಲ್ ನರೈನ್ (29), ಲಿಂಡ್ಲೆ ಸಿಮೋನ್ಸ್ 32 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಸಿಮೋನ್ಸ್ 2 ಸಿಕ್ಸರ್ ಸಹಾಯದಿಂದ 25 ರನ್ ಬಾರಿಸಿ ಔಟ್ ಆದರು. ಟಿಮ್ ಸೀಫರ್ಟ್ 18 ರನ್ ಸಿಡಿಸಿ ಪೆವಿಲಿಯನ್ ಸೇರಿದರು.

ನಾಲ್ಕನೇ ವಿಕೆಟ್ ಗೆ ಕಾಲಿನ್ ಮುನ್ರೋ ಹಾಗೂ ಕಿರನ್ ಪೋಲಾರ್ಡ್ ಜೋಡಿ 73 ರನ್ ಸೇರಿಸಿತು. ಮುನ್ರೋ 54 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಾಯದಿಂದ 65 ಬಾರಿಸಿ ಔಟ್ ಆದರು. ಕಿರನ್ ಪೋಲಾರ್ಡ್ ಅಜೇಯ 33 ರನ್ ಸಿಡಿಸಿದರು.

ಜಮೈಕಾ ತಂಡದ ಪರ ಗ್ಲೇನ್ ಫಿಲಿಪ್ಸ್ 41, ಎನ್ಕ್ರುಮಾ ಬೊನ್ನರ್ 26, ಜೆರ್ಮೈನ್ ಬ್ಲ್ಯಾಕ್ ವುಡ್ 12 ರನ್ ಸೇರಿಸಿ ತಂಡಕ್ಕೆ ಕೊಂಚ ಆಧಾರವಾದರು. ಮಧ್ಯಮ ಕ್ರಮಾಂಕದಲ್ಲಿ ಆಂಡಿ ರಸೆಲ್ 23 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ 50 ರನ್ ಸೇರಿಸಿದರು. ಕಾರ್ಲೂಸ್ ಬ್ರಾಥ್ ವೈಟ್ ಅಜೇಯ 21 ರನ್ ಬಾರಿಸಿದರೂ ತಂಡಕ್ಕೆ ಗೆಲುವಿನ ಮಾಲೆ ತೊಡಿಸುವಲ್ಲಿ ವಿಫಲರಾದರು. ಪರಿಣಾಮ ಜಮೈಕಾ ಸೋಲು ಕಂಡಿತು.

ಗಯಾನಾಗೆ ಎಂಟು ವಿಕೆಟ್ ಜಯ

ಇನ್ನೊಂದು ಪಂದ್ಯದಲ್ಲಿ 20 ಓವರ್ ಗಳಲ್ಲಿ ಬಾರ್ಬಡೋಸ್ ಟ್ರೈಡೆಂಟ್ಸ್ 92 ರನ್ ಗಳಿಗೆ ಆಲೌಟ್ ಆಯಿತು. ಗಯಾನಾ ಅಮೇಜಾನ್ ವಾರಿಯರ್ಸ್ ತಂಡದ ಪರ ನವೀನ್ ಉಲ್ ಹಕ್ ನಾಲ್ಕು ವಿಕೆಟ್ ಪಡೆದರು. ಗುರಿಯನ್ನು ಹಿಂಬಾಲಿಸಿದ ಗಯಾನಾ 16.4 ಓವರ್ ಗಳಲ್ಲಿ 2 ವಿಕೆಟ್ ಗೆ 93 ರನ್ ಸೇರಿಸಿತು.

loading...