ಕೋವಿಡ್ -19 ಹಿನ್ನೆಲೆ: ನೈರುತ್ಯ ರೈಲ್ವೆಯಿಂದ ಕೆಲ ರೈಲುಗಳ ಸಂಚಾರ ರದ್ದು

0
25

ಹುಬ್ಬಳ್ಳಿ:- ಪಶ್ಚಿಮ ಬಂಗಾಳದಲ್ಲಿ ಕೊವಿಡ್ -19 ಲಾಕ್‌ಡೌನ್ ಭಾನುವಾರ ನಿಗದಿಯಾಗಿದ್ದ ಯಶವಂತಪುರ(ಬೆಂಗಳೂರು)- ಹೌರಾ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ರದ್ದುಪಡಿಸಲಾಗಿದೆ.
ಅದೇ ರೀತಿ ಸೆ 11 ರಂದು ಹೌರಾದಿಂದ ನಿರ್ಗಮಿಸಬೇಕಿದ್ದ ಹೌರಾ – ಯಶವಂತಪುರ(ಬೆಂಗಳೂರು) ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನೂ ರದ್ದುಪಡಿಸಲಾಗಿದೆ ಎಂದು ತಿಳಿಸಲಾಗಿದೆ ನೈರುತ್ಯ ರೈಲ್ವೆ ಅಧಿಕಾರಿಗಳು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬೆಂಗಳೂರು – ದಾನಾಪುರ್ ನಡುವಿನ ಸಂಖ್ಯೆ 02295/02296 ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ ಎಂದೂ ಸಹ ಪ್ರಕಟಿಸಲಾಗಿದೆ. ಸೆ 8 ರಿಂದ ಮುಂದಿನ ಪ್ರಕರಣೆ ಹೊರಡಿಸುವವರೆಗೆ ಇದೀಗ ಈ ರೈಲುಗಳು ಚೆನ್ನೈ ಮಾರ್ಗವಾಗಿ ಜೋಲಾರ್‌ಪೇಟ್‍, ಕಾಟ್‍ಪಾಡಿ, ಅರಕೋಣಂ ಮತ್ತು ಚೆನ್ನೈ ಸೆಂಟ್ರಲ್‌ನಲ್ಲಿ ನಿಲುಗಡೆಯೊಂದಿಗೆ ಸಂಚರಿಸಲಿವೆ.. ಈ ರೈಲು ಗುಡೂರ್‌ನಲ್ಲಿ ನಿಲುಗಡೆ ಇರುವುದಿಲ್ಲ. ಈ ಹಿಂದೆ ಕೋವಿಡ್ -19 ಹಿನ್ನೆಲೆಯಲ್ಲಿ ಈ ರೈಲು ಜೋಲಾರ್‌ಪೇಟ್‍, ರೇಣಿಗುಂಟಾ ಮತ್ತು ಗುಡೂರ್ ಮಾರ್ಗವಾಗಿ ಸಂಚರಿಸುತ್ತಿತ್ತು.
ಹಾಸನ- ಸಕಲೇಶಪುರ-ಸುಬ್ರಹ್ಮಣ್ಯ-ಕಣಿಯೂರು-ಕಬಕಪುತ್ತೂರು ಮತ್ತು ಬಂಟ್ವಾಳ ವಿಭಾಗಗಳಲ್ಲಿ ರೈಲಿನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಯಶವಂತಪುರ – ಕಾರವಾರ ಎಕ್ಸ್‌ಪ್ರೆಸ್ ರೈಲಿನ ಸಮಯವನ್ನು ಸೆ 07 ರಿಂದ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ ಎಂದು ಪ್ರಕಟಣೆ ತಿಳಿಸಿದೆ.

loading...