ಯುಎಸ್ ಓಪನ್: ಜ್ವೆರೆವ್, ಥೀಮ್ ಫೈನಲ್ ಪ್ರವೇಶ

0
13

ನ್ಯೂಯಾರ್ಕ್:-ಅಲೆಕ್ಸಾಂಡರ್ ಜ್ವೆರೆವ್ ಮತ್ತು ಡಾಮಿನಿಕ್ ಥೀಮ್ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಭಾನುವಾರ ಮುಖಾಮುಖಿಯಾಗಲಿದ್ದಾರೆ.
ಆರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ಶುಕ್ರವಾರ ತಡರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಐದನೇ ಶ್ರೇಯಾಂಕಿತ ಜ್ವೆರೆವ್ 3-6, 2-6, 6-3, 6-4, 6-3 ಸೆಟ್ ಗಳಿಂದ 20ನೇ ಶ್ರೇಯಾಂಕಿತ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ವಿರುದ್ಧ ಪ್ರಯಾಸದ ಜಯ ಗಳಿಸಿ ಫೈನಲ್ ಗೆ ಹಜ್ಜೆ ಹಾಕಿದರು. 3 ಗಂಟೆ 23 ನಿಮಿಷದ ನಡೆದ ಮ್ಯಾರಥಾನ್ ಹೋರಾಟದಲ್ಲಿ ಮೊದಲೆರಡು ಸೆಟ್ ಗಳಲ್ಲಿ ಹಿನ್ನಡೆ ಅನುಭವಿಸಿದರೂ ಛಲ ಬಿಡದ ಜ್ವೆರೆವ್ ಕೊನೆಯ ಮೂರು ಸೆಟ್ ಗಳಲ್ಲೂ ಪ್ರಾಬಲ್ಯ ಮೆರೆಯುವ ಮೂಲಕ ಪಂದ್ಯ ವಶಪಡಿಸಿಕೊಂಡರು.
ದಿನದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕಿತ ಡಾಮಿನಿಕ್ ಥೀಮ್ 6-2, 7-6 (9-7), 7-6 (7-5) ಸೆಟ್ ಗಳಿಂದ ಡ್ಯಾನಿಲ್ ಮೆಡ್ವೆಡೇವ್ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತು ತಲುಪಿದರು.
2 ಗಂಟೆ 56 ನಿಮಿಷ ನಡೆದ ಹೋರಾಟದಲ್ಲಿ ಮೊದಲ ಸೆಟ್ಟನ್ನು ಸುಲಭವಾಗಿ ಗೆದ್ದ ಜ್ವೆರೆವ್ ಕೊನೆಯ ಎರಡು ಸೆಟ್ಟಗಳನ್ನು ಟೈಬ್ರೇಕರ್ ನಲ್ಲಿ ತಮ್ಮದಾಗಿಸಿಕೊಂಡರು.

loading...