ಬಂಧಿತ ಆರೋಪಿಗಳೊಂದಿಗೆ ನಂಟು ಹೊಂದಿದ ದಿಗಂತ್, ಐಂದ್ರಿತಾ ದಂಪತಿ!

0
18

ಬೆಂಗಳೂರು: ಚಂದನವನಕ್ಕೆ ಮಾದಕ ಜಾಲ ನಂಟು ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ‌ ಮೂಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟ ದಿಗಂತಾ, ಐಂದ್ರಿತಾ ರೈ ನಗರದ ಚಾಮರಾಜ್ ಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಲಿದ್ದಾರೆ.
ಡ್ರಗ್ಸ್ ಪ್ರಕರಣದ ಕಿಂಗ್ ಪಿನ್ ಅನಿಕಾ ಡಿ, ಎನ್ ಸಿಬಿ ವಿಚಾರಣೆ ವೇಳೆ ನೀಡಿದ ಸ್ಫೋಟಕ ಮಾಹಿತಿ ಆಧರಿಸಿಯೇ ಸ್ಯಾಂಡಲ್ ವುಡ್ ದಂಪತಿಗೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.
ಮಾಯಾನಗರಿ ಮುಂಬೈ, ಬೆಂಗಳೂರು, ಹೈದ್ರಾಬಾದ್ ನಲ್ಲಿ ನಡೆಯುವ ಪಾರ್ಟಿಗಳಲ್ಲಿ ಐಂದ್ರಿತಾ, ದಿಗಂತ್ ಪಾಲ್ಗೊಳ್ಳುತ್ತಿದ್ದರು ಎಂದು ಸ್ಯಾಂಡಲ್ ವುಡ್- ಬಾಲಿವುಡ್ ನಂಟಿನ ಕುರಿತಾಗಿ ಅನಿಕಾ ತನಿಖಾಧಿಕಾರಿಗಳ ಎದುರು ಬಾಯ್ಬಿಟ್ಟಿದ್ದಳು. ಆದ್ದರಿಂದಲೇ ದಿಗಂತ್ ದಂಪತಿ ಮೇಲೆ ಎನ್ ಸಿಬಿ ಹದ್ದಿನ ಕಣ್ಣಿಟ್ಟಿದ್ದು, ನಂತರ ಸಿಸಿಬಿಗೆ ನೋಟಿಸ್ ನೀಡಲು ಸೂಚನೆ ನೀಡಿತ್ತು ಎನ್ನಲಾಗಿದೆ.
ಪಾರ್ಟಿಗಳಲ್ಲಿ ಕ್ರೌಡ್ ಪುಲ್ಲಿಂಗ್ ಗಾಗಿ ಸ್ಟಾರ್ ಗಳನ್ನು ಆಹ್ವಾನಿಸಲಾಗುತ್ತಿತ್ತು. ಇಂತಹ ಪಾರ್ಟಿಗಳಲ್ಲಿ ಸ್ಟಾರ್ ಗಳಾಗಿ ದಿಗಂತ್, ಐಂದ್ರಿತಾ ಕೂಡ ಪಾಲ್ಗೊಳ್ಳುತ್ತಿದ್ದರು. ಈ ಮೂಲಕವೇ ಅವರು ಪಾರ್ಟಿಯಲ್ಲಿ ಭಾಗವಹಿಸುವುದಕ್ಕೆ,ಆಫ್ಟರ್ ಪಾರ್ಟಿ ಹೀಗೆ ಎಲ್ಲದಕ್ಕೂ ಹಣ ನೀಡಲಾಗುತ್ತಿದ್ದರಂತೆ. ಪ್ರಕರಣದ ಎ1 ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿಯೊಂದಿಗೆ ದಿಗಂತ್, ಐಂದ್ರಿತಾ ದಂಪತಿ ನಂಟು ಹೊಂದಿದ್ದರಂತೆ. ಅಲ್ಲದೇ, ಇವರಿಬ್ಬರೂ ಅತಿಹೆಚ್ಚು ಸಿಂಥೆಟಿಕ್ ಡ್ರಗ್ಸ್ ತರಿಸಿಕೊಂಡಿದ್ದು, ಇವರು ಡ್ರಗ್ಸ್ ಸೇವಿಸುವುದನ್ನು ತಾನು ಕಣ್ಣಾರೆ ಕಂಡಿರುವುದಾಗಿ ಆರೋಪಿ ರವಿಶಂಕರ್ ಸಿಸಿಬಿ ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ನಾಪತ್ತೆಯಾಗಿರುವ ಆರೋಪಿ ಆದಿತ್ಯ ಆಳ್ವ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ದಿಗಂತ್ ಹಾಗೂ ಐಂದ್ರಿತಾ ಪಾಲ್ಗೊಂಡಿದ್ದರು ಎನ್ನಲಾಗಿದೆ. ನಟ ದಿಗಂತ್ ಕ್ಕಿಂತ ಅವರ ಧರ್ಮ ಪತ್ನಿ ಐಂದ್ರಿತಾ ಹೆಚ್ಚು ಡ್ರಗ್ಸ್ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ವೈಭವ್, ಪ್ರತೀಕ್ ರೊಂದಿಗೂ ಇಬ್ಬರೂ ವಾಟ್ಸಾಪ್ ಕಾಲ್ ನಲ್ಲಿ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಅಲ್ಲದೇ, ದಿಗಂತ್, ಐಂದ್ರಿತಾ ಸಿಮ್ ಬಳಸದೇ ಮೊಬೈಲ್ ಉಪಯೋಗಿಸುತ್ತಿದ್ದರು ಎನ್ನಲಾಗಿದೆ. ಮೊಬೈಲ್ ಡೇಟಾ ಟ್ರೇಸ್ ಆಗದಿರಲು ಸದ್ಯ ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಗಲ್ರಾನಿ ಕೂಡ ಇದೇ ಮಾರ್ಗ ಅನುಸರಿಸಿದ್ದರು ಎನ್ನಲಾಗಿದೆ.
ಅಲ್ಲದೇ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ರೊಂದಿಗೂ ಐಂದ್ರಿತಾ ನಿಕಟ ಸಂಪರ್ಕ ಹೊಂದಿದ್ದು, ಬರ್ತ್ ಡೇ ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಇನ್ನು ಸ್ಯಾಂಡಲ್ ವುಡ್ ನಲ್ಲಿ ದಿಗಂತ್ ಗೆ ಬೇಡಿಕೆ ಕಡಿಮೆಯಾದಾಗ ಐಂದ್ರಿತಾ ‘ವೆಡ್ಡಿಂಗ್ ಪುಲಾವ್’ ಎಂಬ ಬಾಲಿವುಡ್ ಚಿತ್ರ ಮಾಡುವುದಕ್ಕೆ ದಿಗಂತ್ ಗೆ ಅವಕಾಶ ಕಲ್ಪಿಸಿದ್ದರು ಎನ್ನಲಾಗಿದೆ. ಇಂದು ನಡೆಯುವ ಸಿಸಿಬಿ ವಿಚಾರಣೆಯನ್ನು ದಂಪತಿ ಹೇಗೆ ಎದುರಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಜೈಲುಪಾಲಾಗಿದ್ದು, ಇಂದು ಸಂಜನಾರನ್ನು ಸಿಸಿಬಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.

loading...