ಜಾಗತಿಕ ಭದ್ರತೆ : ವೀಡಿಯೊ ಕಾನ್ಫರೆನ್ಸ್ ಮೂಲಕ ಬ್ರಿಕ್ಸ್ ಅಧಿಕಾರಿಗಳ ಸಭೆ

0
29

ಮಾಸ್ಕೋ:-ಭದ್ರತಾ ವಿಷಯಗಳ ಉಸ್ತುವಾರಿ ಹೊಂದಿರುವ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ ಚೀನಾ ಮತ್ತು ದಕ್ಷಿಣ ಆಫ್ರಿಕಾ) ಸದಸ್ಯ ರಾಷ್ಟ್ರಗಳ ಹಿರಿಯ ಅಧಿಕಾರಿಗಳ ಹತ್ತನೇ ಸಭೆ ಗುರುವಾರ ವಿಡಿಯೋ ಕಾನ್ಫರೆನ್ಸ್ ರೂಪದಲ್ಲಿ ನಡೆಯಲಿದೆ ಎಂದು ರಷ್ಯಾದ ಭದ್ರತಾ ಮಂಡಳಿಯ ಹೇಳಿಕೆ ತಿಳಿಸಿದೆ.
ಸಭೆಯಲ್ಲಿ ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಆಧುನಿಕ ಸವಾಲುಗಳು ಮತ್ತು ಬೆದರಿಕೆಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.
ಸಭೆಯಲ್ಲಿ ರಷ್ಯಾವನ್ನು ರಷ್ಯಾದ ಭದ್ರತಾ ಮಂಡಳಿ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೇವ್ ಪ್ರತಿನಿಧಿಸಲಿದ್ದಾರೆ.
ಹಿಂದಿನ ಸಭೆ 2019 ರ ಅಕ್ಟೋಬರ್‌ನಲ್ಲಿ ಬ್ರೆಜಿಲ್‌ನಲ್ಲಿ ನಡೆದಿತ್ತು.

loading...