ಮಟ್ಕಾ ಕಿಂಗ್ ಪಿನ್ ಸೇರಿದಂತೆ 23 ಜನರ ಬಂಧನ

0
23

ಬೆಳಗಾವಿ

ಬೆಳಗಾವಿ ನಗರದ ಖಂಜರ ಗಲ್ಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ವಿಕ್ರಮ್ ಆಮಟೆ ಖುದ್ದಾಗಿ ಮಟಕಾ ಅಡ್ಡೆಯ ಮೇಲೆ ದಾಳಿ ಮಾಡಿ 23 ಜನರನ್ನು ಬಂಧಿಸಿದ ಘಟನೆ ನಡೆದಿದೆ.

ಬೆಳಗಾವಿಯ ಖಂಜರ್ ಗಲ್ಲಿಯಲ್ಲಿ ದಾಳಿ ಮಾಡಿರುವ ಡಿಸಿಪಿ ಆಮಟೆ ಮಟಕಾ ಕಿಂಗ್ ಶಫಿ ತಹಶೀಲ್ದಾರ,ಸೇರಿದಂತೆ,ಮಟಕಾ ಜೂಜಾಟದಲ್ಲಿ ತೊಡಗಿದ್ದ 23 ಜನರನ್ನು ವಶಕ್ಕೆ ಪಡೆದಿದ್ದಾರೆ.

23 ಜನರನ್ನು ವಶಕ್ಕೆ ಪಡೆದಿರುವ ಪೋಲೀಸರು,ಮಟಕಾ ದಂಧೆಗೆ ಬಳಿಸುತ್ತಿದ್ದ 15 ಮೋಬೈಲ್ ಫೋನ್,ಮಟಕಾ ಚೀಟಿ,ಮತ್ತು 2 ಲಕ್ಷ 11ಸಾವಿರ,910 ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...