ಐಪಿಎಲ್: ಕೆಕೆಆರ್ ಗೆ ಮುಂಬೈ ಸವಾಲು

0
7

ಅಬುದಾಬಿ:- ಐಪಿಎಲ್‌ನ ಮೊದಲ ಪಂದ್ಯವನ್ನು ಸೋತಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಬುಧವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಸೆಣಸಾಟ ನಡೆಸಲಿದ್ದು, ಗೆಲುವಿನ ಟ್ರ್ಯಾಕ್ ಗೆ ಮರಳಲು ಪ್ಲಾನ್ ಮಾಡಿಕೊಂಡಿದೆ.
ಅಬುಧಾಬಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐದು ವಿಕೆಟ್ ಸೋಲು ಅನುಭವಿಸಿದ್ದ ಮುಂಬೈಗೆ ಇದು ಎರಡನೇ ಪಂದ್ಯವಾಗಿದೆ. ಇದು ಐಪಿಎಲ್‌ನಲ್ಲಿ ಕೋಲ್ಕತ್ತಾದ ಮೊದಲ ಪಂದ್ಯವಾಗಿದ್ದು, ಪಂದ್ಯಾವಳಿಯಲ್ಲಿ ಗೆಲುವಿನ ಆರಂಭದ ಗುರಿ ಹೊಂದಿದೆ.
ನಾಲ್ಕು ಬಾರಿ ಚಾಂಪಿಯನ್ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ನೇತೃತ್ವದ ಮುಂಬೈ ತಂಡವು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿತ್ತು. ಇದರಿಂದಾಗಿ ಅವರ ಸೋಲು ಅನುಭವಿಸುವಂತೆ ಆಯಿತು. ನಾಯಕ ರೋಹಿತ್‌ಗೆ ಮೊದಲ ಪಂದ್ಯದಲ್ಲಿ ನಿರೀಕ್ಷೆಯಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಆದರೆ ಕೋಲ್ಕತಾ ವಿರುದ್ಧ ದೊಡ್ಡ ಇನ್ನಿಂಗ್ಸ್ ಆಡುವ ಜವಾಬ್ದಾರಿ ಇದೆ. ಮುಂಬೈಗೆ ರೋಹಿತ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಇರುವುದು ಮುಖ್ಯ. ಚೆನ್ನೈ ವಿರುದ್ಧ ರೋಹಿತ್ 12 ರನ್ ಗಳಿಸಲು ಸಾಧ್ಯವಾಗಿತ್ತು.
ಸೂರ್ಯಕುಮಾರ್ ಯಾದವ್ 17, ಹಾರ್ದಿಕ್ ಪಾಂಡ್ಯ 14 ಮತ್ತು ಕೀರನ್ ಪೊಲಾರ್ಡ್ 18 ಬಾರಿಸಿದ್ದರು. ಕ್ವಿಂಟನ್ ಡಿ ಕಾಕ್ ಮಾತ್ರ 33 ಮತ್ತು ಸೌರಭ್ ತಿವಾರಿ 42 ರನ್ ಗಳಿಸಿದರು. ಮುಂಬೈ ಒಂಬತ್ತು ವಿಕೆಟ್‌ಗಳಿಗೆ 162 ರನ್ ಗಳಿಸಲು ಸಾಧ್ಯವಾಯಿತು. ಮತ್ತು ಸೋಲಿನ ನಂತರ ತಂಡವು 15-20 ರನ್‌ಗಳಿಂದ ಹಿಂದೆ ಬಿದ್ದಿದೆ ಎಂದು ರೋಹಿತ್ ಒಪ್ಪಿಕೊಂಡರು.
ಮುಂಬೈಗೆ ಜಸ್ಪ್ರೀತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್ ರೂಪದಲ್ಲಿ ಇಬ್ಬರು ವಿಶ್ವ ದರ್ಜೆಯ ಬೌಲರ್‌ಗಳಿದ್ದು, ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಎದುರಾಳಿ ತಂಡವನ್ನು ಕಾಡಬಲ್ಲರು. ಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಆದರೆ ಅವರು ಚೆನ್ನೈ ವಿರುದ್ಧ ಯಾವುದೇ ಓವರ್ ಬೌಲ್ ಮಾಡಿಲ್ಲ. ಪೊಲಾರ್ಡ್ ತನ್ನ ಸ್ಫೋಟಕ ಸಾಮರ್ಥ್ಯವನ್ನು ತೋರಿಸಬೇಕಾಗಿದೆ ಮತ್ತು ಡೆತ್ ಓವರ್‌ಗಳಲ್ಲಿ ಅವರು ಕೊನೆಯವರೆಗೂ ಆಡಬೇಕಾಗುತ್ತದೆ ಇದರಿಂದ ತಂಡವು ಉತ್ತಮ ಸ್ಕೋರ್ ತಲುಪುತ್ತದೆ.
ಎರಡು ಬಾರಿ ಚಾಂಪಿಯನ್ ಕೋಲ್ಕತಾ ಕೊನೆಯ ಬಾರಿಗೆ 2014 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ತಂಡದ ಪ್ರಸ್ತುತ ನಾಯಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಮತ್ತು ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ.
ಬಾಲಿವುಡ್ ನಟ ಶಾರುಖ್ ಖಾನ್ ಈ ತಂಡದ ಮಾಲೀಕರು. ಈ ಬಾರಿ ತಂಡ ಮತ್ತೊಮ್ಮೆ ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ. ಶಾರುಖ್ ಅವರ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ ನ ಟ್ರಿನ್‌ಬಾಗೊ ನೈಟ್ ರೈಡರ್ಸ್ ಈ ವರ್ಷ ನಾಲ್ಕನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದಿದೆ.
ಕೋಲ್ಕತಾ ತಂಡವು ಸುನಿಲ್ ನರೈನ್, ಇಯಾನ್ ಮಾರ್ಗಾನ್, ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಕುಲದೀಪ್ ಯಾದವ್ ಮತ್ತು ಯುವ ಆಟಗಾರ ಶುಭ್ ಮನ್ ಗಿಲ್ ಅವರ ರೂಪದಲ್ಲಿ ಹಲವಾರು ಉತ್ತಮ ಆಟಗಾರರನ್ನು ಹೊಂದಿದ್ದು, ಪಂದ್ಯಾವಳಿಯಲ್ಲಿ ತಂಡಕ್ಕೆ ಗೆಲುವಿನ ಆರಂಭವನ್ನು ನೀಡುವ ಕನಸು ಕಾಣುತ್ತಿದೆ.
ಕಳೆದ ಕೆಲವು ಋತುಗಳಲ್ಲಿ ಮಾಡಿದಂತೆ ನರೈನ್ ಅವರು ಅದೇ ಸ್ಫೋಟಕವನ್ನು ಬ್ಯಾಟಿಂಗ್ ಮಾಡುತ್ತಾರಾ ಎಂದು ಕಾದಾ ನೋಡಬೇಕಿದೆ. ಗಿಲ್, ಮಾರ್ಗನ್, ಕಾರ್ತಿಕ್ ಮತ್ತು ರಸ್ಸೆಲ್ ತಂಡಕ್ಕೆ ಉತ್ತಮ ಆಟದ ಕಾಣಿಕೆ ನೀಡಬೇಕಿದೆ.
ಕೋಲ್ಕತಾ ಈ ಋತುವಿನಲ್ಲಿ ಕಮ್ಮಿನ್ಸ್ ಅನ್ನು 15.50 ಕೋಟಿ ರೂ.ಗಳ ದೊಡ್ಡ ಬೆಲೆಗೆ ಖರೀದಿಸಿತ್ತು. ಆಸ್ಟ್ರೇಲಿಯಾದ ವೇಗದ ಬೌಲರ್ ಕಮ್ಮಿನ್ಸ್ 82 ಟಿ-20 ಪಂದ್ಯಗಳಲ್ಲಿ 97 ವಿಕೆಟ್ ಪಡೆದಿದ್ದಾರೆ ಮತ್ತು ಈ ಸ್ವರೂಪದಲ್ಲಿ ಅವರ ಅತ್ಯುತ್ತಮ ಪ್ರದರ್ಶನ 16 ರನ್‌ಗಳಿಗೆ ನಾಲ್ಕು ವಿಕೆಟ್.
ಮುಂಬೈ ಮತ್ತು ಕೋಲ್ಕತಾ ನಡುವಿನ ಪಂದ್ಯವು ಖಂಡಿತವಾಗಿಯೂ ಕುತೂಹಲ ಮೂಡಿಸಿದ್ದು, ಈ ಪಂದ್ಯದಲ್ಲಿ ಮುಂಬೈ ಗೆಲುವಿನ ಲಯಕ್ಕೆ ಮರಳಲು ಯೋಜನೆ ರೂಪಸಿಕೊಂಡಿದೆ.

loading...