ಸಹೃದಯಿ ಸರಳ ರಾಜಕಾರಣಿ ಸುರೇಶ್ ಅಂಗಡಿ

0
57

 

ಸಹೃದಯಿ ಸರಳ ರಾಜಕಾರಣಿ ಸುರೇಶ್ ಅಂಗಡಿ
ಬೆಳಗಾವಿ:
ಬೆಳಗಾವಿ ಅಭಿವೃದ್ದಿ ಹಗಳಿರುಳು ಶ್ರಮಿಸಿದ ಸಹೃಯಿ, ಸರಳ ರಾಜಕಾರಣಿ ಕೇಂದ್ರ ಸಚಿವ ಸುರೇಶ್ ಅಂಗಡಿಯವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ವಿದಿವಶರಾಗಿದ್ದಾರೆ.

ಸುರೇಶ್ ಅಂಗಡಿಯವರಿಗೆ ೬೫ ವರ್ಷ ವಯಸ್ಸಾಗಿತ್ತು. ೧೯೫೫ ಜೂನ್ ೧ರಂದು ಜನಿಸಿದ ಅಂಗಡಿಯವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿ ಸಂಸದರಾಗಿದ್ದರು. ಪ್ರಸ್ತುತ ಕೇಂದ್ರ ರೈಲ್ವೆ ರಾಜ್ಯ ಖಾತೆಯ ಸಚಿವರಾಗಿದ್ದರು.

ಅಂಗಡಿಯವರಿಗೆ ಸೆಪ್ಟೆಂಬರ್ ೧೧ರಂದು ಕರೊನಾ ದೃಢಪಟ್ಟಿತ್ತು. ಯಾವುದೇ ರೋಗ ಲಕ್ಷಣಗಳಿಲ್ಲದೇ ಕರೊನಾ ಪಾಸಿಟಿವ್ ವರದಿಯಾಗಿತ್ತು. ಈ ಕುರಿತು ಸ್ವತಃ ಅವರೇ ಟ್ವೀಟ್ ಮಾಡಿದ್ದರು. ಅಂದಿನಿAದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅಂಗಡಿಯವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಅಂಗಡಿಯವರು ಬೆಳಗಾವಿ ಜಿಲ್ಲೆ ಮತ್ತು ತಾಲೂಕಿನ ಕೆ.ಕೆ. ಕೊಪ್ಪ ಮೂಲದವರು. ಚೆನ್ನಬಸಪ್ಪ ಮತ್ತು ಸೋಮವ್ವ ದಂಪತಿಯ ಮಗನಾಗಿ ಹುಟ್ಟಿದ ಅಂಗಡಿಯವರ ಪೂರ್ಣ ಹೆಸರು ಸುರೇಶ್ ಚನ್ನಬಸಪ್ಪ ಅಂಗಡಿ. ಇವರು ಇಬ್ಬರು ಪುತ್ರಿ ಮತ್ತು ಪತ್ನಿಯನ್ನು ಅಗಲಿದ್ದಾರೆ.

loading...