ಬಹುತೇಕ ಕೇಂದ್ರ ಸಚಿವ ಅಂಗಡಿ ಅಂತ್ಯಕ್ರಿಯೆ ದೆಹಲಿಯಲ್ಲಿ..!

0
35

ಬಹುತೇಕ ಕೇಂದ್ರ ಸಚಿವ ಅಂಗಡಿ ಅಂತ್ಯಕ್ರಿಯೆ ದೆಹಲಿಯಲ್ಲಿ..!

ಬೆಳಗಾವಿ

ಕೇಂದ್ರ ಸಚಿವ ಸುರೇಶ್ ಅಂಗಡಿ ಪಾರ್ಥಿವ ಶರೀರ ಬೆಳಗಾವಿಗೆ ತರುವ ವಿಚಾರದಲ್ಲಿ ಬಹುತೇಕ ಕೇಂದ್ರ ಸಚಿವ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿಯೇ ನಡೆಯಲಿದೆ ಎಂದು ತಿಳಿದು ಬಂದಿದೆ.

ಕೇಂದ್ರ ಸಚಿವ ಸುರೇಶ ಅಂಗಡಿ ಅವರಿಗೆ ಕೋವಿಡ್-19 ಸೋಂಕು ತಗುಲಿದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೆರೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನು ಸ್ವತಃ ಸಚಿವರೆ ಟ್ಟಿಟ್ ಮಾಡಿದ್ದರು. ಏಮ್ಸ್ ಆಸ್ಪತ್ರೆಯ ವೈದ್ಯರು ಮತ್ತೊಮ್ಮೆ ಮರಣೋತ್ತರ ಕೊರೊನಾ ಟೆಸ್ಟ್‌ಗೆ ಮುಂದಾಗಿದ್ದಾರೆ.

ಏಮ್ಸ್ ವೈದ್ಯರ ಜೊತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತುಕತೆ ನಡೆಸಿದ್ದಾರೆ. ಮರಣೋತ್ತರ ಕೋವಿಡ್ ಟೆಸ್ಟ್ ನಡೆಸಲು ವೈದ್ಯರ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದರೆ ಮಾತ್ರ ಪಾರ್ಥಿವ ಶರೀರ ತರಲು ಯಾವುದೇ ಅಡ್ಡಿ ಇಲ್ಲ. ದೆಹಲಿಯ ನಿವಾಸದಿಂದ ಏಮ್ಸ್ ಆಸ್ಪತ್ರೆಗೆ ಆಗಮಿಸಿದ ಸುರೇಶ್ ಅಂಗಡಿ ಪತ್ನಿ ಮಂಗಲ್, ಪುತ್ರಿ, ಅಳಿಯ ಪಾರ್ಥಿವ ಶರೀರ ಕಂಡು ಬಿಕ್ಕಿ ಬಿಕ್ಕಿ ಅತ್ತ ಸುರೇಶ ಅಂಗಡಿ ಪತ್ನಿ ಮಂಗಲ ಅಂಗಡಿ, ಸುರೇಶ್ ಅಂಗಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ವಿವಿಧ ರಾಜಕೀಯ ಗಣ್ಯರು ಬೆಳಗಾವಿಯ ಕೇಂದ್ರ ಸಚಿವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ರಾತ್ರಿ 1.30ಕ್ಕೆ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ದೆಹಲಿಗೆ ತಲುಪಲಿದ್ದು ಅವರ ನಿರ್ಧಾರವೇ ಅಂತಿಮ ವಾಗಲಿದೆ. ಇಲ್ಲದಿದ್ದರೆ, ದೆಹಲಿಯ ಓಹಿಯಾ ರಸ್ತೆಯಲ್ಲಿರುವ ಚಿತಾಗೃಹದಲ್ಲಿ ಅಂತ್ಯಕ್ರಿಯೆ ನೆರವೆರಿಸಲಿದ್ದಾರೆ ಎಂದು ಕೇಂದ್ರ ಸಚಿವರ ಆಪ್ತರು ತಿಳಿಸಿದ್ದಾರೆ. ಒಂದು ವೇಳೆ ಬೆಳಗಾವಿಗೆ ಬಂದರೆ ಕೆ.ಕೆ.ಕೊಪ್ಪದ ಅವರ ತಾಯಿಯ ಹೆಸರಿನಲ್ಲಿ ಸ್ಥಾಪನೆ ಮಾಡಿದ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಂತ್ಯಕ್ರಿಯೆ ನಡೆಸುವುದಾಗಿ ಅವರ ಹಿರಿಯ ಸಹೋದರ ಸಿ.ಸಿ.ಅಂಗಡಿ ತಿಳಿದ್ದಾರೆ.

loading...