“ಲಿಂಗಾಯತ” ಜಾತಿ ಪ್ರಮಾಣ ಪತ್ರ ನೀಡಿ: ಹುಕ್ಕೇರಿ ಲಿಂಗಾಯತ ಸಮುದಾಯದ ಮನವಿ

0
105

“ಲಿಂಗಾಯತ” ಜಾತಿ ಪ್ರಮಾಣ ಪತ್ರ ನೀಡಿ:ಹುಕ್ಕೇರಿಯಲ್ಲಿ ಲಿಂಗಾಯತ ಸಮುದಾಯದ ಮನವಿ

ಕನ್ನಡಮ್ಮ ಸುದ್ದಿ:ಹುಕ್ಕೇರಿ : ನಮ್ಮದು ಮೂಲ ಲಿಂಗಾಯತ ಜಾತಿ ,ನಮಗೆ ವೀರಶೈವ ಲಿಂಗಾಯತ ಜಾತಿ ಪ್ರಮಾಣ ಪತ್ರ ಬೇಡ. ನಮಗೆ “ಲಿಂಗಾಯತ” ಎಂದೆ ಜಾತಿ ಪ್ರಮಾಣ ನೀಡಬೇಕೆಂದು ಹುಕ್ಕೇರಿ ತಾಲೂಕಿನ ಲಿಂಗಾಯತ ಸಮಾಜದ ವತಿಯಿಂದ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನ ಸಲ್ಲಿಸಿದರು .

ಇಂದು ಹುಕ್ಕೇರಿ ತಹಶಿಲ್ದಾರರಿಗೆ ಮನವಿ ಸಲ್ಲಿಸಿದ ಅವರು ನಾವು ಲಿಂಗಾಯತರಾಗಿದ್ದು ,ನಮ್ಮ ಎಲ್ಲ ದಾಖಲಾತಿಗಳು ಲಿಂಗಾಯತ ಎಂದೆ ಇದ್ದು,ನಮಗೆ ಲಿಂಗಾಯತ ಅಂತಾನೆ ಜಾತಿ ಪ್ರಮಾಣದ ಪತ್ರ ನೀಡಬೇಕು.ಜಾತಿ ಪ್ರಮಾಣದ ಪತ್ರಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದರೆ ನಮಗೆ ವೀರಶೈವ ಲಿಂಗಾಯತ ಎಂದು ಪ್ರಮಾಣದ ಪತ್ರ ನೀಡಲಾಗುತ್ತಿದ್ದು ,ಇದು ಮುಜುಗರಕ್ಕೆ ಕಾರಣವಾಗಿದೆ. ಆದ್ದರಿಂದ ನಮಗೆ “ವೀರಶೈವ”ಲಿಂಗಾಯತ ಬದಲಾಗಿ ಲಿಂಗಾಯತ ಎಂದು ಪ್ರಮಾಣದ ಪತ್ರ ನೀಡುವಂತೆ ಸಂಭಂದಿಸಿದ ಅಧಿಕಾರಿಗಳುಗೆ ಸೂಚಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ .

ಈ ವೇಳೆ ಲಿಂಗಾಯತ ಸಮಾಜದ ಮುಖಂಡರಾದ ವಿಜಯ ಯಮಕನಮರಡಿ ,ವಿನಯ ಪಾಟೀಲ , ಮಹಾಂತೇಶ ಚೌಗಲಾ,ಮಹೇಶ ಪಾಟೀಲ ,ಮಹೇಶ ಬೋರಗಲ್ಲಿ ,ಪ್ರವೀಣ ಅನ್ನೋಜಿ,ಮಹೇಶ ಕಾಡಗಿ ,ಪ್ರಕಾಶ ನಿಲಜಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು .

loading...