ಅಗಲಿದ ನಾಯಕನಿಗೆ ಯಮಕನಮರಡಿ ಕ್ಷೇತ್ರದ ಬಿಜೆಪಿ ಮುಖಂಡರಿಂದ ಶ್ರದ್ಧಾಂಜಲಿ

0
240

ಅಗಲಿದ ನಾಯಕನಿಗೆ ಯಮಕನಮರಡಿ ಕ್ಷೇತ್ರದ ಬಿಜೆಪಿ ಮುಖಂಡರಿಂದ ಶ್ರದ್ಧಾಂಜಲಿ

ಕನ್ನಡಮ್ಮ ಸುದ್ದಿ -ಸಂಕೇಶ್ವರ: ಸಮೀಪದ ಅರ್ಜುನವಾಡ ಗ್ರಾಮದಲ್ಲಿ ಬಿಜೆಪಿ ಹಿರಿಯ ನಾಯಕ ,ಕೇಂದ್ರ ರೇಲ್ವೆ ರಾಜ್ಯ ಸಚಿವರಾಗಿದ್ದ ಲೋಕಸಭಾ ಸದಸ್ಯರಾದ ದಿ.ಸುರೇಶ ಅಂಗಡಿ ನಿಧನಕ್ಕೆ ಶುಕ್ರವಾರ ಯಮಕನಮರಡಿ ಬಿಜೆಪಿ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು .

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಮಾರುತಿ ಅಸ್ಟಗಿ ಕೊರೊನ ಸೊಂಕಿಗೆ ತುತ್ತಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿ ನಿಧನರಾದ ನಮ್ಮ ನಾಯಕರು ಜಿಲ್ಲೆಯ ಹೆಮ್ಮೆಯ ರಾಜಕಾರಣಿಗಳಾಗಿದ್ದ ಸುರೇಶ ಅಂಗಡಿಯವರ ಸಾವು ಜಿಲ್ಲೆಗೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.ಸರಳ ಸಜ್ಜಣಿಕೆ ರಾಜಕಾರಣಿಗಳಾಗಿ ನಾಲ್ಕು ಬಾರಿ ಲೋಕಸಭಾಗೆ ಆಯ್ಕೆಯಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನ ಜಿಲ್ಲೆಗೆ ನೀಡಿದ್ದರು ,ಅಂಗಡಿಯವರ ನಿಧನದಿಂದ ಬಿಜೆಪಿ ಪಕ್ಷ ಪ್ರಾಮಾಣಿಕ ಮತ್ತು ಧೀಮಂತ ನಾಯಕನ್ನ ಕಳೆದುಕೊಂಡಿದೆ ಎಂದು ಸಂತಾಪ ವ್ಯಕ್ತಪಡಿಸಿದರು .

ಈ ಸಂಧರ್ಭದಲ್ಲಿ ಹನುಮಂತರಾವ್ ಇನಾಮದಾರ್ ,ಅನಿಲ ಕುಲಕರ್ಣಿ ,ಶಂಕರ ಘೋರ್ಪಡೆ, ಬಸಗೌಡ ಪಾಟೀಲ ,ಮಹಾಂತೇಶ ರಾಮನಕಟ್ಟಿ,ಸಂತೋಷ ಪಾಟೀಲ ,ಪ್ರವೀಣ ದೇಸಾಯಿ ,ಅಣ್ಣಾಗೌಡ ಪಾಟೀಲ ,ರವಿಂದ್ರ ನಾಯಿಕ ,ರಾಮಗೌಡ ಪಾಟೀಲ ಸೇರಿದಂತೆ ಅರ್ಜುನವಾಡ,ಕೋಚರಿ ಮತ್ತು ಕುರಣಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು .

loading...