ಲಸಿಕೆಗೆ ಮೊದಲೇ 20 ಲಕ್ಷ ಜನರ ಬಲಿ ಪಡೆಯಲಿರುವ ಕರೋನ: ಡಬ್ಲ್ಯೂಎಚ್ಒ

0
31
World Health Organization leaders at a press briefing on COVID-19, held on March 6 at WHO headquarters in Geneva. Here's a look at its history, its mission and its role in the current crisis.

ಜಿನೇವಾ:- ಕರೋನ ಮಣಿಸಲು ಪರಿಣಾಮಕಾರಿ ಲಸಿಕೆ ಬಳಕೆಗೆ ಬರುವ ಮೊದಲೇ ಜಗತ್ತಿನಲ್ಲಿ ಸಾವಿನ ಸಂಖ್ಯೆ 20 ಲಕ್ಷ ದಾಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಕಳವಳ ವ್ಯಕ್ತಪಡಿಸಿದೆ.

ತ್ವರಿತ, ಅಂತಾರಾಷ್ಟ್ರೀಯ ಕ್ರಮತೆಗೆದುಕೊಳ್ಳದೆ ಹೋದರೆ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಅಪಾಯವಿದೆ ಎಂದು ಡಬ್ಲ್ಯೂಎಚ್ಒದ ತುರ್ತು ಪರಿಸ್ಥಿತಿ ವಿಭಾಗದ ಮುಖ್ಯಸ್ಥ ಮೈಕ್ ರಿಯಾನ್ ಹೇಳಿದ್ದಾರೆ.

ಚೀನಾದಲ್ಲಿ ಸೋಂಕು ಹರಡಲು ಆರಂಭಿಸಿ ಒಂಬತ್ತು ತಿಂಗಳ ಬಳಿಕ ಕೋವಿಡ್ 19 ಸಾವಿನ ಸಂಖ್ಯೆ 10 ಲಕ್ಷ ದಾಟಿದೆ ನಾವು ಸೂಕ್ತ ಕ್ರಮ ತೆಗೆದುಕೊಳ್ಳದೆ ಹೋದರೆ ಮುಂದೆ ಇದರಿಂದ 20 ಲಕ್ಷಕ್ಕೂ ಹೆಚ್ಚು ಸಾವು ಸಂಭವಿಸಲಿದೆ, ಇದು ಕೇವಲ ಊಹೆ , ಕಲ್ಪನೆಯಲ್ಲ ಬದಲಿಗೆ ದುರದೃಷ್ಟವಶಾತ್ ವಾಸ್ತವಿಕ ಸತ್ಯ ಎಂದು ಹೇಳಿದ್ದಾರೆ.

ಜಗತ್ತಿನಾದ್ಯಂತ ಲಾಕ್ಡೌನ್ ನಿರ್ಬಂಧಗಳನ್ನು ಮತ್ತು ನಿಯಮಗಳನ್ನು ಸಡಿಲಿಸಲಾಗಿದೆ. ಈಗ ಸೋಂಕು ವ್ಯಾಪಕವಾಗಿ ಹರಡಲು ಯುವಜನರು ಕಾರಣ ಎಂದು ಆಪಾದಿಸುವುದು ಸೂಕ್ತವಲ್ಲ ಎಂದಿದ್ದಾರೆ.

ಅಮೆರಿಕವೊಂದರಲ್ಲಿಯೇ ಸಾವಿನ ಸಂಖ್ಯೆ 2 ಲಕ್ಷ ದಾಟಿದೆ. ಭಾರತದಲ್ಲಿ ಸಾವಿನ ಸಂಖ್ಯೆ ಒಂದು ಲಕ್ಷ ಸನಿಹದ ಗಡಿಯಲ್ಲಿದೆ. ಕೊರೊನಾ ಸಂಬಂಧಿ ಸಾವಿನ ಸಂಖ್ಯೆ ಹತ್ತು ಲಕ್ಷ ದಾಟುತ್ತಿದೆ , ಆದರೂ ಸೋಂಕಿಗೆ ಪರಿಣಾಮಕಾರಿ ಲಸಿಕೆ ಕಂಡುಹಿಡಿಯಲು ಇನ್ನು ಸಾಕಷ್ಟು ಸಮಯ ಹಿಡಿಯಲಿದೆ ಎಂದೂ ಅವರು ಹೇಳಿದರು.

loading...