ವಿವಾಹಿತ ಮಹಿಳೆಯರಿಬ್ಬರ ಭೀಕರ ಹತ್ಯೆ

0
106

ವಿವಾಹಿತ ಮಹಿಳೆಯರಿಬ್ಬರ ಭೀಕರ ಹತ್ಯೆ
ಬೆಳಗಾವಿ:
ದುಷ್ಕರ್ಮಿಗಳಿಬ್ಬರು ವಿವಾಹಿತ ಮಹಿಳೆಯರಿಬ್ಬರನ್ನು ನಡುರಸ್ತೆಯಲ್ಲಿ ಬೀಕರವಾಗಿ ಹತ್ಯೆ ಮಾಡಿರುವ ಘಟನೆ ಮಚ್ಚೆಗ್ರಾಮದ ಲಕ್ಷಿö್ಮನಗರದಲ್ಲಿ ನಡೆದಿದೆ.
ಕಾಳೆನಟ್ಟಿ ರಾಜೇಶ್ರಿ ರವಿ ಬನ್ನೂರ್ (೨೧), ರೋಹಿಣಿ ಗಂಗಪ್ಪ ಕುಲಮನಿ(೨೧) ಕೊಲೆಯಾದ ದುರ್ದೈವಿಗಳು. ಇಬ್ಬರಲ್ಲಿ ಓರ್ವ ಮಹಿಳೆ ಐದು ತಿಂಗಳ ಗರ್ಭಿಣಿ ಎನ್ನಲಾಗಿದೆ.
ಇಬ್ಬರು ವಿವಾಹಿತ ಮಹಿಳೆಯರು ಸಮೀಪದ ಬ್ರಹ್ಮದೇವರ ದೇವಸ್ಥಾನಕ್ಕೆ ಆಗಮಿಸುತ್ತಿರುವ ವೇಳೆಯಲ್ಲಿ, ದುಷ್ಕರ್ಮಿಗಳಿಬ್ಬರು ಬೈಕ್ ಮೇಲೆ ರಬ್ಬಸವಾಗಿ ಆಗಮಿಸಿ ಕಣ್ಣಿಗೆ ಕಾರದ ಪುಡಿ ಏರಚಿ ಚಾಕುವಿನಿಂದ ಕತ್ತು ಕೊಯ್ದು ಪರಾರಿಯಾಗಿದ್ದು, ಗ್ರಾಮಸ್ಥರು ಪೊಲೀಸ್‌ರಿಗೆ ಮಾಹಿತಿ ತಿಳಿಸಿದ್ದಾರೆ. ಹತ್ಯೆ ಹಿಂದಿನ ಮರ್ಮವೇನು? ಎಂಬುವುದು ತನಿಖೆ ನಂತರ ದೃಢವಾಗಲಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಹಾಗೂ ಬೆಳಗಾವಿ ಗ್ರಾಮೀಣ ಪೊಲೀಸ್ ಪಿಎಸ್‌ಐ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
೦೫
*****-

loading...