“ಕರ್ನಾಟಕ ಬಂದ್”ಹಿನ್ನಲೆ : ನಾಳೆ ನಡೆಯಬೇಕಿದ್ದ ಎಲ್ಲ ಸ್ನಾತಕ ಪರೀಕ್ಷೆಗಳು ಮುಂದೂಡಿಕೆ

0
30

“ಕರ್ನಾಟಕ ಬಂದ್”ಹಿನ್ನಲೆ : ನಾಳೆ ನಡೆಯಬೇಕಿದ್ದ ಎಲ್ಲ ಸ್ನಾತಕ ಪರೀಕ್ಷೆಗಳು ಮುಂದೂಡಿಕೆ

ಕನ್ನಡಮ್ಮ ಸುದ್ದಿ : ಬೆಳಗಾವಿ : ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಿರೋಧಿಸಿ
ಕನಾಟಕ ರಾಜ್ಯದ ವಿವಿಧ ರೈತ ಸಂಘಟನೆಗಳು ನಾಳೆ ದಿ. 28 ” ಕನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ದಿನಾಂಕ 28-09-2020 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ನಡೆಯಬೇಕಿದ್ದ ಎಲ್ಲಾ ಸ್ವಾತಕ ಪದವಿ ಪರೀಕ್ಷೆಗಳನ್ನು ” ದಿನಾಂಕ 29-09-2020 ‘ ಕ್ಕೆ ಮೂಂದೂಡಲಾಗಿದೆ .

ಪರೀಕ್ಷೆ ನಡೆಯುವ ವೇಳಾಪಟ್ಟಿಯ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ . ಸದರಿ ವಿಷಯವನ್ನು ಎಲ್ಲಾ ವಿದ್ಯಾರ್ಥಿಗಳ ಗಮನಕ್ಕೆ ತರಲು ಪ್ರೊ . ಎಸ್‌ಮ್ , ಹುರಕಡ್ಲಿ , ಕುಲಸಚಿವರು ಮೌಲ್ಯಮಾಪನ ಇವರು ಎಲ್ಲ ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಂಶುಪಾಲರುಗಳಿಗೆ ತಿಳಿಸಿದ್ದಾರೆ .

ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಯಾವುದೇ ತೊಂದರೆಯಾಗಬಾರದೆಂದು ಪರೀಕ್ಷೆ ಮುಂದೂಡಲಾಗಿದೆ .ರೈತರ ಪ್ರತಿಭಟನೆ ವೇಳೆ ಸಂಚಾರದ ಸಮಸ್ಯೆಯಾಗುವ ಸಾಧ್ಯತೆ ಇದ್ದು ,ಇದು ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಜರಾಗಲು ತೊಂದರೆಯಾಗುವ ಸಾದ್ಯತೆ ಕೂಡ ಇರುವುದರಿಂದ ವಿವಿ ಕುಲ ಸಚಿವರು ಪರೀಕ್ಷೆಯನ್ನ ಮುಂದೂಡಿದ್ದಾರೆ .

loading...