ಹಿರಾಶುಗರ ಕಾರ್ಖಾನೆಗೆ ನಿಖಿಲ್ ಕತ್ತಿ ನೂತನ ಸಾರಥಿ

0
129

ಹಿರಾಶುಗರ ಕಾರ್ಖಾನೆಗೆ ನಿಖಿಲ್ ಕತ್ತಿ ನೂತನ ಸಾರಥಿ

ಕನ್ನಡಮ್ಮ ಸುದ್ದಿ -ಸಂಕೇಶ್ವರ :ಇಲ್ಲಿನ ಪ್ರತಿಷ್ಠಿತ ಹಿರಾ ಶುಗರ್ ಕಾರ್ಖಾನೆಗೆ ಕಾರಣಾಂತರಗಳಿಂದ ಖಾಲಿಯಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷರಾಗಿ ನಿಖಿಲ ಕತ್ತಿ ಆಯ್ಕೆಯಾಗಿದ್ದಾರೆ .

ರಾಜ್ಯದ ಪ್ರತಿಷ್ಠಿತ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾದ ಸಂಕೇಶ್ವರ ಹಿರಾ ಶುಗರ್ಸ ಕ್ಕರೆ ಕಾರ್ಖಾನೆಗೆ ಈ ಹಿಂದೆ ಅಪ್ಪಾಸಾಹೇಬ ಶಿರಕೊಳ್ಳಿ ಅಧ್ಯಕ್ಷರಾಗಿದ್ದರು ,ಕಾರಣಾಂತರಗಳಿಂದ ಅವರು ರಾಜೀನಾಮೆ ನೀಡಿದ ಹಿನ್ನೆಲೆ ಇಂದು ನಿಖಿಲ್ ಕತ್ತಿ ಅವರನ್ನ ನೂತನ ಸಾರಥಿಯನ್ನಾಗಿ ನೇಮಿಸಲಾಗಿದೆ .

ಇಂದು ಅಧ್ಯಕ್ಷ ಸ್ಥಾ‌ನಕ್ಕೆ ನೇಮಕವಾದ ಬೆನ್ನಲೆ ಹಿರಿಯರಾದ ಶ್ರೀಶೈಲ ಮಗದುಮ್ಮ ಅವರು ನೂತನ ಅಧ್ಯಕ್ಷರಿಗೆ ಹೂ ಗುಚ್ಚ ನೀಡಿ ಶುಭ ಕೊರಿದ್ದಾರೆ .ಈ ವೇಳೆ ಮಾಜಿ ಅಧ್ಯಕ್ಷರಾದ ಶಿವನಾಯಿಕ ನಾಯಿಕ ಸೇರಿದಂತೆ ಇತರರು ಇದ್ದರು .

loading...