ಬೈಡನ್ – ಕಮಲಾ ಹ್ಯಾರೀಸ್ ಗೆ ಅಭಿನಂದನೆಗಳ ಮಹಾಪೂರ…!

0
16

ವಾಷಿಂಗ್ಟನ್:- ಅಮೆರಿಕದ 46ನೇ ಅಧ್ಯಕ್ಷರಾಗಲು ಅರ್ಹತೆ ಪಡೆದಿರುವ ಡೆಮಾಕ್ರಾಟಿಕ್ ಪಕ್ಷದ ಜೋಸೆಫ್ ಬೈಡನ್ ಹಾಗೂ ಉಪಾಧ್ಯಕ್ಷರಾಗಲಿರುವ ಕಮಲಾ ಹ್ಯಾರೀಸ್ ಅವರಿಗೆ ಶುಭಹಾರೈಕೆ, ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ, ಐರ್ಲೆಂಡ್ ಪ್ರಧಾನಿ ಮೈಕಲ್ ಸೇರಿದಂತೆ ವಿಶ್ವದೆಲ್ಲೆಡೆಯಿಂದ ಅನೇಕ ಮುಖಂಡರು ಶುಭ ಹಾರೈಸಿದ್ದಾರೆ.

ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಮುಗಿಯಲಿದೆ. ಬಳಿಕ ಬೈಡನ್ ಅಧಿಕಾರ ಸ್ವೀಕರಿಸಲಿದ್ದಾರೆ. ಈ ತಿಂಗಳ ಅಂತ್ಯಕ್ಕೆ 78ನೇ ವರ್ಷಕ್ಕೆ ಕಾಲಿಡಲಿರುವ ಬೈಡನ್, ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎನಿಸಿಕೊಳ್ಳಲಿದ್ದಾರೆ. ಪೆನ್ಸಿಲ್ವೇಲಿಯಾದ ಫಲಿತಾಂಶ ಹೊರಬಂದಿದ್ದು, ಅಧ್ಯಕ್ಷರಾಗಲು ಅಗತ್ಯವಿದ್ದ ಎಲೆಕ್ಟೊರಲ್ ಮತಗಳ ಗಡಿ ದಾಟುವಲ್ಲಿ ಬೈಡೆನ್ ಅವರಿಗೆ ನೆರವಾಗಿದೆ. ಪೆನ್ಸಿಲ್ವೇನಿಯಾದ 20 ಮತಗಳೊಂದಿಗೆ ಬೈಡೆನ್ 273 ಎಲೆಕ್ಟೊರಲ್ ಮತಗಳನ್ನು ಪಡೆಯಲಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ, ಉಪಾಧ್ಯಕ್ಷರಾಗಿ ನೀವು ಭಾರತ ಹಾಗೂ ಅಮೆರಿಕದ ಬಾಂಧವ್ಯ ವೃದ್ಧಿಗೆ ಶ್ರಮಿಸಿದ್ದಿರಿ ನಿಮ್ಮ ಜಯಕ್ಕೆ ನನ್ನ ಅಭಿನಂದನೆಗಳು. ಭಾರತ ಹಾಗೂ ಅಮೆರಿಕ ನಡುವಿನ ಬಾಂಧವ್ಯ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನ ಮುಂದುವರೆಯಲಿ ಎಂದೂ ಮೋದಿ ಸಂದೇಶದಲ್ಲಿ ಶುಭ ಹಾರೈಸಿದ್ದಾರೆ.

loading...