ಸಂಕೇಶ್ವರ ಗಾಳಿಪಟ ಉತ್ಸವ ರಾಷ್ಟ್ರ ಮಟ್ಟದಲ್ಲಿ ಬೆಳೆಯಲಿ : ನಾಯಿಕ

0
27

ಸಂಕೇಶ್ವರ ಗಾಳಿಪಟ ಉತ್ಸವ ರಾಷ್ಟ್ರ ಮಟ್ಟದಲ್ಲಿ ಬೆಳೆಯಲಿ : ನಾಯಿಕ

ಕನ್ನಡಮ್ಮ ಸುದ್ದಿ-ಸಂಕೇಶ್ವರ : ಈ ವರ್ಷ ಕಳೆದ ಜನೇವರಿ‌ ತಿಂಗಳಲ್ಲಿನಲ್ಲಿ ಪಟ್ಟಣದ ಉದ್ಯಮಿಯಾದ ಪವನ ಕಣಗಲಿ ಅವರು ಆಯೋಜಿಸಿದ್ದ ‘ಗಾಳಿಪಟ ಉತ್ಸವ’ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಇದು ರಾಷ್ಟ್ರಮಟ್ಟದವರೆಗೂ ಬೆಳೆಯಲಿ ಎಂದು ಹುಕ್ಕೇರಿಯ ಸಮನ್ವಯಾಧಿಕಾರಿಗಳಾದ ಎಸ್.ಡಿ. ನಾಯಿಕ ಹೇಳಿದರು.

ರವಿವಾರ ಕಣಗಲಿ ಬಡಾವಣೆಯಲ್ಲಿ ಆಯೋಜಿಸಲಾದ ಗಾಳಿಪಟ ಉತ್ಸವದಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕೊರೊನ
ಲಾಕ್ ಡೌನ್ ದಿಂದ ಕಳೆದ ಜನೇವರಿಯಲ್ಲಿ ಮಕರ ಸಂಕ್ರಾಂತಿ ನಿಮಿತ್ಯ ನಡೆದ ಗಾಳಿಪಟ ಉತ್ಸವದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ರವಿವಾರ ಆಯೋಜಿಸಲಾಗಿದ್ದು, ಕಣಗಲಿ ಅವರು ಗಾಳಿ ಪಟ ಉತ್ಸವ ಆಯೋಜನೆ ಮಾಡುವ ಮೂಲಕ ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಉತ್ತೆಜನೆ ನೀಡಿದ್ದಾರೆ ಎಂದರು .

ಗಾಳಿ ಪಟ ಉತ್ಸವದ ಆಯೋಜಕರಾದ ಪವನ ಕಣಗಲಿ ಮಾತನಾಡಿ ಲಾಕ್ ಡೌನ್ ಕಾರಣ ಗಾಳಿಪಟ ಉತ್ಸವ ಬಹುಮಾನ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿತ್ತು. ಈಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಬರುವ ವರ್ಷವು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಗಾಳಿಪಟ ಉತ್ಸದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು .

ಉತ್ಸವದಲ್ಲಿ ಆಯೋಜಿಸಲಾಗಿದ್ದ “ಗಾಳಿಪಟ ತಾಯಾರಿಸುವ ವಿಭಾಗದಲ್ಲಿ”
ಶುಭಂ ಹಿಡದುಗ್ಗಿ , ಸೋಹಮ ಕಾಡಿಯಾ, ಯಶರಾಜ ವೈರಾಗಿ, ಪ್ರಥಮ ಬಹುಮಾನ 2000, ರೂ ತಮ್ಮದಾಗಿಸಿಕೊಂಡಿದಾರೆ.
ಅಜಾನ ಮುಲ್ಲಾ,ಸೋಮೇಶ ಮುಗಳಿ,ಶ್ರೇಯಸ್ ಬೋಸಲೇ 1000,ದ್ವಿತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದಾರೆ.
ಅಮನ ಮುತ್ತಾನಿ, ಸಂದ್ಯಾ ಪಾಟೀಲ, ಯಶಗೌಡಾ ಪಾಟೀಲ ತೃತೀಯ ಬಹುಮಾನ 500ರೂ.ತಮ್ಮದಾಗಿಸಿಕೊಂಡರು.

“ಗಾಳಿಪಟ ಹಾರಾಟದ ಸ್ಪರ್ಧೆಯಲ್ಲಿ” 1)ಗಣೇಶ ಕಾಳಿಸಿಂಗೆ 2) ಪ್ರಥಮೇಶ ವಾಘಮೋರೆ ವಿಜೇತರಾದರು 3) ಕುಶಾಲ ಬೋರಗಾಂವ ಅವರು 3000ರೂ.ಗಳ ಬಹುಮಾನವನ್ನು ತಮ್ಮದಾಗಿಸಿದಾರೆ.
ಸಂದೀಪ್ ಸುಣದಾಳೆ, ಅಭಿಷೇಕ ಮಾಳಿ, ಅಯಾನ್ ಮುಲ್ಲಾ ದ್ವಿತೀಯ 2000,ಬಹುಮಾನವನಗನು ತಮ್ಮದಾಗಿಸಿದಾರೆ.ತೃತೀಯ ಬಹುಮಾನವಾದ 1000ರೂ.ಗಳನ್ನು ಅಥರ್ವ ಹರಗಾಪೂರ, ಸ್ವರೂಪ ಮಾಳಂಗಿ, ಸಂಕೇತ ಹಿಡದುಗ್ಗಿ ಅವರು ಪಡೆದುಕೊಂಡಿದ್ದಾರೆ .

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅಮ್ಮಣಗಿಯ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಸುರೇಶ ಹುಣಶ್ಯಾಳಿ, ಮುಖಂಡರಾದ ಇಲಿಯಾಸಬೇಗ ಇನಾಮದಾರ, ಶಿವಾನಂದ ಬೋರಗಾಂವಿ,ಹಾಗೂ ನಗರದ ಪತ್ರಕರ್ತರಿಗೆ ವಿಶೇಷವಾಗಿ ಸನ್ಮಾನಿಸಿದರು. ಪೀಪಲ್ಸ್ ಬ್ಯಾಂಕಿನ ಮ್ಯಾನೇಜರ್ ಶಾಮಲಿಂಗ ಹಾಲಟ್ಟಿ, ಅವರು ಸ್ವಾಗತಿಸಿ,ವಂದಿಸಿದರು.

loading...