ಶಕಿಬ್ ಅಲ್ ಹಸನ್ ಗೆ ಕೊಲೆ ಬೆದರಿಕೆ

0
15

ನವದೆಹಲಿ:-ಕಳೆದ 2019ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಗಮನಾರ್ಹ ಪ್ರದರ್ಶನ ತೋರಿದ್ದ ಬಾಂಗ್ಲಾದೇಶ ತಂಡದ ಸ್ಟಾರ್‌ ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌ ಅವರಿಗೆ ತಮ್ಮದೇ ದೇಶದ ಯುವನೊಬ್ಬ ಫೇಸ್‌ಬುಕ್‌ ಲೈವ್‌ನಲ್ಲಿ ಕೊಲೆ ಬೆದರಿಕೆ ಹಾಕಿದ್ದಾನೆ.

ಇತ್ತೀಚೆಗೆ ಶಕೀಬ್‌ ಅಲ್‌-ಹಸನ್‌ ಕೋಲ್ಕತ್ತಾಗೆ ಆಗಮಿಸಿ ಕಾಳಿ ಮಾತಾ ಪೂಜೆಯಲ್ಲಿ ಭಾಗಿಯಾಗಿದ್ದರು. ಇದರಿಂದ ತೀವ್ರ ಆಕ್ರೋಶಕ್ಕೆ ಒಳಗಾದ ಮೂಲಭೂತವಾದಿಗಳ ಒಂದು ವರ್ಗ ಅವರ ವಿರುದ್ಧ ಹಲವು ಬೆದರಿಕೆಗಳು ಹಾಕಿದ್ದರು. ಅಲ್ಲದೆ,
ಸಿಲ್ಹೆಟ್‌ನ ಶಹಪುರ್ ತಾಲ್ಲೂಕಿನ ಪ್ಯಾರಾ ನಿವಾಸಿ ಮೊಹ್ಸಿನ್ ತಾಲ್ಲೂಕ್ದರ್ ಎಂಬ ಯುವಕ ಭಾನುವಾರ ಮಧ್ಯಾಹ್ನ 12.06 ಕ್ಕೆ ಫೇಸ್‌ಬುಕ್ ಲೈವ್ ಪ್ರಾರಂಭಿಸಿದರು.

ಫೇಸ್‌ಬುಕ್ ಲೈವ್‌ನಲ್ಲಿ ಯುವಕ, ನೀವು(ಶಕೀಬ್‌) ಕೋಲ್ಕತಾ ಕಾಳಿ ಮಾತೆ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿ ಮುಸ್ಲಿಂರ ಭಾವನೆಗಳಿಗೆ ದಕ್ಕೆ ತಂದಿದ್ದೀರಿ. ನಿಮ್ಮನ್ನು ಕತ್ತಿಯಿಂದ ತುಂಡು-ತುಂಡಾಗಿ ಕತ್ತರಿಸುತ್ತೇನೆ ಹಾಗೂ ಅಗತ್ಯವಿದ್ದರೆ, ಸಿಲ್ಹೆಟ್ ನಿಂದ ಢಾಕಾಗೆ ಬಂದು ಕತ್ತಿಯಿಂದ ಕೊಲ್ಲುವುದಾಗಿ ಶಕೀಬ್‌ಗೆ ಎಚ್ಚರಿಕೆ ನೀಡಿದ್ದಾನೆ.

ಈ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಕ್ರಿಕೆಟ್‌ನೆಕ್ಸ್ಟ್‌ನಲ್ಲಿ ಉಲ್ಲೇಖಿಸಿದಂತೆ, ಸಿಲ್ಹೆಟ್ ಪೊಲೀಸ್ ಹೆಚ್ಚುವರಿ ಉಪ ಆಯುಕ್ತ ಬಿ.ಎಂ. ಅಶ್ರಫ್ ಉಲ್ಲಾ ತಾಹೆರ್ ಅವರು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

“ಈ ವಿಷಯದ ಬಗ್ಗೆ ಎಚ್ಚರಗೊಂಡಿದ್ದೇವೆ. ಯುವಕನ ಫೇಸ್‌ಲೈವ್‌ ವಿಡಿಯೋ ಲಿಂಕ್‌ ಅನ್ನು ಸೈಬರ್‌ ಬ್ರಾಂಚ್‌ಗೆ ನೀಡಿದ್ದೇವೆ. ಅತಿ ಶೀಘ್ರದಲ್ಲಿಯೇ ಕಾನೂನು ಕ್ರಮವನ್ನು ಜರುಗಿಸಲಾಗುವುದು,” ಎಂದು ಅವರು ತಿಳಿಸಿದ್ದಾರೆ.

ವೆಸ್ಟ್‌ ಇಂಡೀಸ್‌‌ ವಿರುದ್ಧದ ಟಿ20, ಟೆಸ್ಟ್‌ ಸರಣಿಗಳಿಗೆ ನ್ಯೂಜಿಲೆಂಡ್‌ ತಂಡ ಪ್ರಕಟ

ಕಳೆದ ವರ್ಷ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ಶಕೀಬ್‌ ಅಲ್-ಹಸನ್‌ ಅವರು ಮ್ಯಾಚ್‌ ಫಿಕ್ಸಿಂಗ್‌ಗಾಗಿ ತಮ್ಮನ್ನು ಬುಕ್ಕಿಗಳು ಸಂಪರ್ಕಿಸಿದ್ದ ಬಗ್ಗೆ ಸಂಬಂಧಿತ ಪ್ರಾಧಿಕಾರಕ್ಕೆ ತಿಳಿಸಿರಲಿಲ್ಲ. ಈ ಬಗ್ಗೆ ಅವರು ತಪ್ಪು ಒಪ್ಪಿಕೊಂಡಿದ್ದರು. ಈ ಕಾರಣದಿಂದ ಅವರನ್ನು ಎರಡು ವರ್ಷಗಳ ಕಾಲ ಐಸಿಸಿ ಅಮಾನತುಗೊಳಿಸಿತ್ತು. ಕಳೆದ ಅಕ್ಟೋಬರ್‌ 29ರಂದು ಅವರ ಶಿಕ್ಷೆಯ ಅವಧಿ ಮುಕ್ತಾಯವಾಗಿತ್ತು.

loading...