ಜಾತಿಗೊಂದು ನಿಗಮ ಬೇಡ: ಪ್ರೊ. ಗವಿಮಠ

0
33

ಬೆಳಗಾವಿ
ಕರ್ನಾಟಕ ಸರ್ಕಾರ ಜಾತಿಗೊಂದು ನಿಗಮ ಅಥವಾ ಪ್ರಾಧಿಕಾರ ಸ್ಥಾಪಿಸುವುದು ತರ್ಕಬದ್ಧವೆನಿಸುವುದಿಲ್ಲ ಎಂದು ಹಿರಿಯ ಸಾಹಿತಿ, ಪ್ರೋ. ಬಿ.ಎಸ್. ಗವಿಮಠ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸಮಗ್ರ ಕರ್ನಾಟಕದಲ್ಲಿ ಊಹಿಸಲಾರದಷ್ಟು ಜಾತಿ ಉಪಜಾತಿಗಳಿವೆ. ತೀರ ಹಿಂದುಳಿದ ಸಮುದಾಯಗಳಿವೆ. ಹೀಗಾಗಿ ನೂರಾರು ನಿಗಮಗಳನ್ನು ಹುಟ್ಟುಹಾಕಿ ೫೦ ಕೋಟಿ ಅಥವಾ ನೂರು ಕೋಟಿ ರೂಪಾಯಿಗಳನ್ನು ಒದಗಿಸಿದರೆ ಸಮುದಾಯಗಳು ಅಭಿವೃದ್ಧಿ ಹೊಂದಲಾರವು. ಆದ್ದರಿಂದ ಜಾತಿ ಧರ್ಮ ಯಾವುದೇ ಇರಲಿ ಅವುಗಳನ್ನು ಆಧರಿಸದೆ ಆದಾಯ ಆಧರಿಸಿ ಬಡತನ ರೇಖೆ ಕೆಳಗಿರುವ ಎಲ್ಲ ಜಾತಿ ಉಪಜಾತಿಗಳವರಿಗೆ ಮೀಸಲಾತಿ ಹಾಗೂ ಇತರ ಓಬಿಸಿ ಸೌಲಭ್ಯಗಳನ್ನು ನೀಡಿದರೆ ಮಾತ್ರ ಯಾವುದೇ ಸಮಸ್ಯೆ ಆಗಲಾರದು ಎಂದಿದ್ದಾರೆ.
ವೀರಶೈವ-ಲಿAಗಾಯತ ಅಭಿವೃದ್ಧಿ ನಿಗಮವಾಗಲಿ, ಬ್ರಾಹ್ಮಣ ಅಭಿವೃದ್ಧಿ ನಿಗಮವಾಗಲಿ, ಮರಾಠಿ ಅಭಿವೃದ್ಧಿ ನಿಗಮಗಳಿಗೆ ಮಾತ್ರ ಅನುದಾನ ಒದಗಿಸಿದರೆ ಯಾರ ಉದ್ಧಾರವೂ ಆಗಲಾರದು. ಅವುಗಳ ಹೆಸರು ಬದಲಿಸಿದರೂ ಏನೂ ಆಗದು. ಸರಕಾರ ಮರು ಯೋಚನೆ ಮಾಡಲಿ ಎಂದು ಗವಿಮಠ ಸರಕಾರಕ್ಕೆ ಸಲಹೆ ನೀಡಿದ್ದಾರೆ.

loading...