ಡಿಸಿಪಿ ವಿಕ್ರಂ ಅವರಿಗೆ ಮುಖ್ಯಮಂತ್ರಿ ಚಿನ್ನದ ಗರಿ

0
89

ಡಿಸಿಪಿ ವಿಕ್ರಂ ಅವರಿಗೆ ಮುಖ್ಯಮಂತ್ರಿ ಚಿನ್ನದ ಗರಿ

ಬೆಳಗಾವಿ:
ಮಹಾನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಕಾರ್ಯನಿರ್ವಸುತ್ತಿರುವ ವಿಕ್ರಂ ಅಮ್ಟೆ ಅವರು ಸೇರಿದಂತೆ ೨೦೧೭-೧೮ನೇ ಸಾಲಿನ ಜಿಲ್ಲೆಯ ಏಳು ಅಧಿಕಾರಿಗಳಿಗೆ ಶುಕ್ರವಾರ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದೆ.
ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿ ಪಟ್ಟಣದ ಸುಪುತ್ರ ಡಿಸಿಪಿ ವಿಕ್ರಂ ಆಮ್ಟೆ ಅವರಿಗೆ ಮುಖ್ಯಮಂತ್ರಿ ಪದಕ ಸಿಕ್ಕಿದೆ. ಕರ್ತವ್ಯಕ್ಕೆ ಸೇರ್ಪಡೆಗೊಂಡ ೮ ವರ್ಷ ಸೇವಾ ಅವಧಿಯೊಳಗೆ ಮುಖ್ಯಮಂತ್ರಿ ಪ್ರಶಸ್ತಿ ಸಿಕ್ಕಿರುವುದು ಯುವ ಪೊಲೀಸ್ ಸಮುದಾಯಕ್ಕೆ ಕರ್ತವ್ಯ ಮಾಡಲು ಪ್ರೇರಣೆ.
ಬೆಂಗಳೂರಿನ ವಿಧಾನ ಸೌಧದಲ್ಲಿ ಶುಕ್ರವಾರ ಆಯೋಜಿಸಿದ ಮುಖ್ಯಮಂತ್ರಿ ಪದಕ ಕಾರ್ಯಕ್ರಮದಲ್ಲಿ ಬೆಳಗಾವಿ ಪೊಲೀಸ್ ಇಲಾಖೆಯ ಒಟ್ಟು ಏಳು ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ ಲಬಿಸಿದೆ. ಈ ಪೈಕಿ ಡಿಸಿಪಿಯಾಗಿ ಕಾರ್ಯನಿರ್ವಸುವ ವಿಕ್ರಂ ಅಮ್ಟೆ, ಪೊಲೀಸ್ ಸಿಬ್ಬಂದಿಯಾಗಿರುವ ರಮೇಶ ಅಕ್ಕಿ ಹಾಗೂ ಸಂಕೇಶ್ವರದ ಅಶೋಕ ಉಗಲಾಟ ಅವರಿಗೆ ಈ ಚಿನ್ನದ ಪದಕ ದೊರೆತ್ತಿದೆ.
ಸೇವಾ ಕಾರ್ಯಪರಿಗಣಿಸಿ ಸರಕಾರ ಪ್ರಾಮಾಣಿಕ ಮತ್ತು ಖಡಕ ಅಧಿಕಾರಿಗಳಿಗೆ ಸರಕಾರ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿದೆ.

loading...