ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಂತೋಷ ಮುಡಶಿ ನೇಮಕ

0
78

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಂತೋಷ ಮುಡಶಿ ನೇಮಕ

ಕನ್ನಡಮ್ಮ ಸುದ್ದಿ:ಸಂಕೇಶ್ವರ : ಸಂಕೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಟ್ಟಣದ ಯುವ ನಾಯಕ ಸಂತೋಷ (ರವಿರಾಜ) ಮುಡಸಿಯವರನ್ನ ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ .

ಸಂಕೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂಜಯ ನಷ್ಠಿ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಸಂತೋಷ ಮುಡಶಿಯವರನ್ನ ನೇಮಕ ಮಾಡಲಾಗಿದೆ .

ನೂತನ ಅಧ್ಯಕ್ಷ ಸಂತೋಷ ಮುಡಶಿ ಈ ಹಿಂದೆ ಕನ್ನಡ ಪರ ಸಂಘಟನೆ ಮೂಲಕ ಗುರುತಿಸಿಕೊಂಡಿದ್ದು ,ಪುರಸಭೆ ಸದಸ್ಯರಾಗಿಯು ಕಾರ್ಯ ನಿರ್ವಹಿಸಿದ್ದಾರೆ .ಮಾಜಿ ಸಚಿವ ಎ.ಬಿ ಪಾಟೀಲ ಅವರ ಆಪ್ತರಾಗಿದ್ದು ,ಹುಕ್ಕೇರಿ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಯುವ ನಾಯಕ ಸಂತೋಷ ಮುಡಸಿ ನೇಮಕದಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ .

ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಹಾಗೂ ಸ್ಥಳಿಯ ಕಾಂಗ್ರೆಸ್ ನಾಯಕರ ಸಹಯೋಗದಲ್ಲಿ ಪಕ್ಷದ ಬಲವರ್ಧನೆಗೆ ಕಾರ್ಯೋನ್ಮೋಖರಾಗಬೇಕೆಂದು ಸೂಚಿಸಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಶುಭ ಹಾರೈಸಿದ್ದಾರೆ .

loading...