ಲೋಕಲ್ ಅಖಾಡಕ್ಕೆ ಕೇಸರಿ ಪಡೆ ಸನ್ನಧ್ದ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಆಯೋಜನೆ : ಪಂಚಾಯತಿ ಗೆಲ್ಲಲು ಬಿಜೆಪಿ ತಯಾರಿ

0
76

ಲೋಕಲ್ ಅಖಾಡಕ್ಕೆ ಕೇಸರಿ ಪಡೆ ಸನ್ನಧ್ದ
ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಆಯೋಜನೆ : ಪಂಚಾಯತಿ ಗೆಲ್ಲಲು ಬಿಜೆಪಿ ತಯಾರಿ

ಕನ್ನಡಮ್ಮ ಸುದ್ದಿ – ಹುಕ್ಕೇರಿ : ನಗರದಲ್ಲಿ ಆಯೋಜಿಸಿದ್ದ ಯಮಕನಮರ್ಡಿ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ವಿಧಾನಸಭಾ ಕ್ಷೇತ್ರಗಳ ಭಾರತೀಯ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್ ಉದ್ಘಾಟಿಸುವ ಮೂಲಕ ಲೋಕಲ್ ಪೈಟ್ ಗೆ ಚಾಲನೆ ನೀಡಿದ್ದಾರೆ .

ನಿನ್ನೆಯಷ್ಟೆ ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯತಿ ಚುನಾವಣಾಗೆ ದಿನಾಂಕ ಪ್ರಕಟಿಸಿತ್ತು ,ಇದೆ ಡಿ.೨೨ ಮತ್ತು ೨೭ ರಂದು ಎರಡು ಹಂತದಲ್ಲಿ ಪಂಚಾಯತಿ ಚುನಾವಣಾ ನಡೆಯಲಿದ್ದು ,ಈ ಹಿನ್ನೆಲೆ ಇಂದು ಹುಕ್ಕೇರಿಯಲ್ಲಿ ಬಿಜೆಪಿ ನಾಯಕರು ಅಧಿಕೃತವಾಗಿ ಚಾಲನೆ ನೀಡಿದರು .

ಇಂದು ನಡೆದ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ ಶೆಟ್ಟರ್ , ಗ್ರಾಮ ಪಂಚಾಯತ, ತಾಲೂಕಾ ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಚುನಾವಣೆಗಳು ಕಾರ್ಯಕರ್ತರ ಬೆಳವಣೆಗೆಗೆ ಅವಕಾಶವಿದೆ, ಆದ್ದರಿಂದ ಇಂಥ ಸಮಾವೇಶಗಳನ್ನು ಆಯೋಜಿಸುವ ಮೂಲಕ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಕಾರ್ಯಕರ್ತರ ಗೆಲುವಿಗೆ ಶ್ರಮಿಸಲಾಗುವುದು ಎಂದರು.

ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಬೇಕು . ಈಗ ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಚಿಂತನೆ ನಡೆದಿದೆ,ಗ್ರಾಮ ಪಂಚಾಯತಿ ನಲ್ಲೂ ಆನ್ ಲೈನ್ ವ್ಯವಸ್ಥೆಯು ಬರಲಿದೆ ಎಂದರು. ಕಾರ್ಯಕರ್ತರನ್ನು ಗ್ರಾಮ ಪಂಚಾಯತ ಚುನಾವಣೆಗಳು ನಾಯಕರನ್ನಾಗಿ ಮಾಡುತ್ತವೆ. ಬಿ ಜೆ ಪಿ ಸರ್ಕಾರದಲ್ಲೆ ಹೆಚ್ಚು ಗ್ರಾಮ ಪಂಚಾಯತಿ ಕಟ್ಟಡಗಳು ನಿರ್ಮಾಣವಾಗಿವೆ, ಅಲ್ಲದೇ ಗ್ರಾಮಿಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದರು.

ಸಮಾವೇಶದಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿ, ಶಶಿಕಲಾ ಜೋಲ್ಲೆ, ಸಚಿವ ಸಿ ಪಿ ಪಾಟೀಲ, ಮಹಾಂತೇಶ ಕವಟಗಿಮಠ, ಅಣ್ಣಾಸಾಹೇಬ ಜೋಲ್ಲೆ, ಪಿ ರಾಜೀವ,ಮಾರುತಿ ಅಷ್ಟಗಿ, ಶಶಿಕಾಂತ ನಾಯಿಕ,ರಮೇಶ ಕತ್ತಿ ಮತ್ತಿತರರು ಉಪಸ್ಥಿತರಿದ್ದರು.

 

loading...