ಸ್ನಾತಕೋತ್ತರ ಪದವಿದರ ಈಗ ಗ್ರಾಮ ಪಂಚಾಯತಿ ಸದಸ್ಯ

0
94

ಸ್ನಾತಕೋತ್ತರ ಪದವಿದರ ಈಗ ಗ್ರಾಮ ಪಂಚಾಯತಿ ಸದಸ್ಯ

ಕನ್ನಡಮ್ಮ ವಿಶೇಷ

ಸಂಕೇಶ್ವರ: ಗ್ರಾಮ ಪಂಚಾಯತಿಗೆ ವಿದ್ಯಾವಂತರು ಆಯ್ಕೆಯಾಗಿ ಬರಬೇಕು,ಇದರಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂಬ ಮಾತಿನಂತೆ ಇತ್ತೀಚೆಗೆ ರಾಜಕೀಯದ ಕಡೆ ಯುವಕರು ಅದರಲ್ಲೂ ವಿದ್ಯಾವಂತ ಯುವಕರು ರಾಜಕಿಯದತ್ತ ಮುಖ ಮಾಡುತ್ತಿದ್ದಾರೆ.ಈ ಬಾರಿ ಗ್ರಾ ಪಂ ಚುನಾವಣೆಯಲ್ಲಿ ಅತಿ ಹೆಚ್ಚು ಯುವಕರು ಆಯ್ಕೆಯಾಗುವ ಮೂಲಕ
ಗ್ರಾಮದ ಅಭಿವೃದ್ಧಿಗೆ ನಾವು ಸಿದ್ದ ಎಂಬ ಸಂದೇಶ ಸಾರುತ್ತಿದ್ದಾರೆ.

ನಿನ್ನೆಯಷ್ಟೆ ಗ್ರಾಮ ಪಂಚಾಯತಿ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು ಅದೆಷ್ಟೋ ಯುವಕರು ಗೆದ್ದು ಪಂಚಾಯತಿ ಪ್ರವೇಶ ಮಾಡಿದ್ದಾರೆ. ಆದರೆ ಇಲ್ಲೊಬ್ಬ ಯುವಕ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಗ್ರಾಮದ ಅಭಿವೃದ್ಧಿಗೆಂದು ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ್ದಾನೆ. ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಸಂಬಳ ಬಂದರೆ ಸಾಕು ಇಷ್ಟೇ ಜೀವನ ಎನ್ನುವವರ ಮಧ್ಯೆ, ನಾನು ಬೆಳೆದ ಊರಿನ ಅಭಿವೃದ್ಧಿಗೆ ನಿಲ್ಲುತ್ತೇನೆ ಎಂಬುದು ಈ ಯುವಕನ ಮಾತಾಗಿದೆ.

ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದ ಪದವಿದರ ಅಣ್ಣಾಗೌಡ ಬಾಳಗೌಡ ಪಾಟೀಲ ಎಂಬ ಯುವಕ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ.ಸದ್ಯ ಸಂಕೇಶ್ವರ ಖಾಸಗಿ ಸಂಸ್ಥೆಯಲ್ಲಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.
ಆದರೆ ಗ್ರಾಮದ ಅಭಿವೃದ್ಧಿ ದೆಸೆಯಿಂದ ಗೋಟುರ ಪಂಚಾಯತಿ ವಾರ್ಡ ನಂ ನಾಲ್ಕರ ಸಾಮಾನ್ಯ ಅಭ್ಯರ್ಥಿಯಾಗಿ ಅದರಲ್ಲಿಯು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸುವ ಮೂಲಕ ಹೊಸ ಕನಸಿನೊಂದಿಗೆ ತಾನು ಹುಟ್ಟಿ ಬೆಳೆದ ಊರಿಗೆ ದುಡಿಯುವ ಉತ್ಸಾಹ ಹೊಂದಿದ್ದಾನೆ.‌

ಒಟ್ಟಿನಲ್ಲಿ ರಾಜಕೀಯದಿಂದ ದೂರ ಹೋಗುತ್ತಿರುವ ಯುವ ಸಮೂಹದ ಮಧ್ಯೆ ಪ್ರಾಮಾಣಿಕ ರಾಜಕೀಯ ಮಾಡುವ ಆಸೆಯಿಂದ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಊರ ಅಭಿವೃದ್ಧಿ ಕನಸು ಕಂಡವರಿಗೆ ಶುಭವಾಗಲಿ ಎಂಬುದು ನಮ್ಮ ಆಶಯ.

 

(ಆನಂದ ಭಮ್ಮನ್ನವರ)

loading...