ಕಿತ್ತೂರು ಉಪನೊಂದಣಾಧಿಕಾರಿ ಸುಭಾಷಗೆ ಎರಡು ವರ್ಷ ಕಠಿಣ ಶಿಕ್ಷೆ

0
27

ಬೆಳಗಾವಿ
ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿ ಬಿದಿದ್ದ ಕಿತ್ತೂರು ಉಪನೋಂದಣಾಧಿಕಾರಿ ಸುಭಾಷ ಪಂಚಪ್ಪ ಸೊಗಲದ ಅವರಿಗೆ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ೫ ಸಾವಿರ ರು. ದಂಡ ವಿಧಿಸಿ ನಾಲ್ಕನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಕಿತ್ತೂರಿನಲ್ಲಿ ಪ್ಲಾಟ್ ಖರೀದಿಸಲು ಬೈಲಹೊಂಗಲದ ಬಿಷ್ಠಪ್ಪ ಶಿಂಧೆ ಅವರು ಕಿತ್ತೂರು ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಮಾಡಿಸಿದ್ದು, ನೊಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಕಡಿಮೆ ಮಾಡಿರುತ್ತೇವೆ ಎಂದು ಹೇಳಿ ಅವರಿಂದ ಮೂಲ ಖರೀದಿ ಪತ್ರ ನೀಡಲು ೮,೮೦೦ ರು.ಗಳ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಆರೋಪಿಯ ಬಳಿ ಇದ್ದ ಲಂಚದ ಹಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು.
ಕಲಂ ೧೩(೧) ಲ, ಕಲಂ ೧೩(೨) ಲಂಚ ಪ್ರತಿಬಂಧಕ ಕಾಯ್ದೆ ೧೯೮೮ನೇಯಡಿಯಲ್ಲಿ ಆರೋಪಿ ಉಪನೊಂದಣಾಧಿಕಾರಿಗೆ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ಬಾಂಡ್ ರೈಟರ್ ವೀರಪ್ಪ ಉರ್ಫ ಈರಣ್ಣಾ ವೀರಭದ್ರಪ್ಪ ಕುಡಲಿ ಅವರನ್ನು ತಪ್ಪಿತಸ್ಥತ ಎಂದು ತೀರ್ಪು ನೀಡಿ ಒಂದು ವರ್ಷ ಕಠಿಣ ಶಿಕ್ಷೆ ಹಾಗೂ ೫ ಸಾವಿರ ರು. ದಂಡ ವಿಧಿಸಿದೆ. ಅಂದಿನ ಇನ್ಸಪೆಕ್ಟರ್ ರಾಘವೇಂದ್ರ ಹವಾಲ್ದಾರ ಪ್ರಕರಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರಕಾರಿ ಅಭಿಯೋಜಕರಾದ ಪ್ರವೀಣ ಅಗಸಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

loading...