ಕೆಎಸ್ ಆರ್ ಟಿಸಿ ಡಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹ

0
720

ಬೆಳಗಾವಿ
ಕೆಎಸ್ ಆರ್ ಟಿಸಿ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಸ್ಟೇಟ್ ಟ್ರಾನ್ಸಪೋರ್ಟ ಎಂಪ್ಲಯಿಜ್ ಯೂನಿಯನ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಡಿಸಿಎಂ ಲಕ್ಷ್ಮಣ ಸವದಿಗೆ ಮನವಿ ರವಾನಿಸಿದರು.

ಬೆಳಗಾವಿಯ ಕೆಎಸ್ ಆರ್ ಟಿಸಿ ನಿಯಂತ್ರಣಾಧಿಕಾರಿಯ ಭ್ರಷ್ಟಾಚಾರ ನಡೆಸುವುದನ್ನು ಎಲ್ಲ ದಾಖಲೆಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ನೀಡಿದ್ದೇವೆ. ಆಗ ತನಿಖೆ ಮಾಡಿದ್ದರು‌ ಆದರೆ ಪ್ರಸ್ತುತ ದಿನದಲ್ಲಿ ಕೆಎಸ್ ಆರ್ ಟಿಸಿ ಬೆಳಗಾವಿ ವಿಭಾಗೀಯ ನಿಯಂತ್ರಣಾಧಾರಿಯ ಪ್ರಭಾವದಿಂದ ಅದು ಮಂದಗತಿಯಲ್ಲಿ ಸಾಗುತ್ತಿದೆ. ಅಲ್ಲದೆ ಅವರು ಮತ್ತಷ್ಟು ಭ್ರಷ್ಟಾಚಾರ ಮುಂದುವರೆಸಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.
ಡಿಸಿಎಂ, ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ಅವರ ಕ್ಷೇತ್ರದವರಾದ ಇವರು ಅವರ ಹೆಸರು ಹೇಳಿಕೊಂಡು ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ವರ್ಗಾವಣೆ ಕೇಳಿದರೆ ಇವರು 20 ಸಾವಿರ ಹಣ ಕೇಳುತ್ತಾರೆ‌. ಜನಪ್ರತಿನಿಧಿಳಿಗೆ ಕೊಡಬೇಕೆಂದು ಹೇಳುತ್ತಾರೆ. ಅಂಥ ಭ್ರಷ್ಟ ಅಧಿಕಾರಿಯಿಂದ ಸಾರಿಗೆ ಸಂಸ್ಥೆಗೆ ಕೆಟ್ಟು ಹೆಸರು ಬರುತ್ತಿದೆ. ಕೂಡಲೇ ಅವರನ್ನು ಅಮಾನತ್ತು ಮಾಡಿ ಕಠಿಣ ಶಿಕ್ಷೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಎಸ್.ಆರ್.ಪಾಟೀಲ, ಆಯ್, ಆಯ್. ಮುನಿಯಾರ, ಸಂಜೀವ ದೇವರಮನಿ, ಜಗದೀಶ ದೊಡ್ಡನಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...