ಜಿಲ್ಲಾಧ್ಯಕ್ಷರಾಗಿ ಬಾಳಪ್ಪಾ ನೇಮಕ

0
177

ಜಿಲ್ಲಾಧ್ಯಕ್ಷರಾಗಿ ಬಾಳಪ್ಪಾ ನೇಮಕ
ಬೆಳಗಾವಿ: ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಬಾಳಪ್ಪಾ ಬಸವಣ್ಣಿ ಗುಡಗನಟ್ಟಿ ಅವರನ್ನು ನೇಮಕ ಮಾಡಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ರಾಜ್ಯ ಅಧ್ಯಕ್ಷ ಹರೀಶ್ ಅವರು ಆದೇಶವನ್ನು ಹೊರಡಿಸಿದ್ದಾರೆ.
ಕನ್ನಡ ನಾಡು ನುಡಿ ಜಲ ಸಂಸ್ಕೃತಿ ಮತ್ತು ಪರಂಪರೆಗಳ ರಕ್ಷಣೆಗಾಗಿ ಪ್ರಮಾಣಿಕ ಹೋರಾಟ ಮಾಡುತ್ತಿರುವ ಹೋರಾಟಗಾರರಾದ ಬಾಳಪ್ಪಾ ಬಸವಣ್ಣಿ ಗುಡಗನಟ್ಟಿ ರವರನ್ನು ಸಾಮಾಜಿಕ ಕಳಕಳಿ ಹಾಗೂ ಸಂಘಟನಾ ಸಾಮರ್ಥ್ಯವನ್ನು ಗುರುತಿಸಿ ಬೆಳಗಾವಿ ಜಿಲ್ಲಾ ಅಧ್ಯಕ್ಷರನ್ನಾಗಿ ರಾಜ್ಯ ಸಮಿತಿಯ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.
ಇತರ ತಮ್ಮ ಅಧೀನ ಪದಾಧಿಕಾರಿಗಳನ್ನು ಹಾಗೂ ತಾಲೂಕ ಅಧ್ಯಕ್ಷರುಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿದ್ದು ಮುಂದಿನ ಸಂಘಟನೆಯ ಬೆಳವಣಿಗೆಯಲ್ಲಿ ಸಮಾಜಿಕ ಸೇವೆಗಳಲ್ಲಿ ತೊಡಗಿಸಿ ಎಂದು ರಾಜ್ಯ ಅಧ್ಯಕ್ಷರು ಅಭಿನಂದಿಸಿದ್ದಾರೆ.

loading...