ಮೈಸೂರು ಮೃಗಾಲಯದ ಮಾದರಿಯಲ್ಲಿ ಭೂತರಾಮನಟ್ಟಿ ಮೃಗಾಲಯ ಅಭಿವೃದ್ಧಿ ಪಡಿಸಲಾಗುವುದು: ಕೆಪಿಸಿಸಿ ಕಾರ್ಯಾಧ್ಯಕ್ಷ ಜಾರಕಿಹೊಳಿ

0
34

 

ಬೆಳಗಾವಿ

ಕಾಕತಿಯ ಭೂತರಾಮನಟ್ಟಿ ಬಳಿ ಇರುವ ರಾಣಿ ಚನ್ನಮ್ಮ ಮೃಗಾಲಯವನ್ನು ಮೈಸೂರು ಮೃಗಾಲಯದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಮಂಗಳವಾರ ಭೂತರಾಮನಟ್ಟಿ ಕಿತ್ತೂರು ರಾಣಿ ಚನ್ನಮ್ಮ ಝೂನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಕಾಕತಿಯಲ್ಲಿರುವ ಮೃಗಾಲಯಕ್ಕೆ ಹಿಂದಿನ ಸರಕಾರದ ಅವಧಿಯಲ್ಲಿ ಸಿಂಹವನ್ನು ತರಲು ಪ್ರಸ್ತಾವನೆ ಸಲ್ಲಿಸಿದ್ದೇವು. ಅದು ಈಗ ಸಾಕಾರಗೊಂಡಿದೆ.

ಸಿಂಹ ನೋಡಲು ಈ ಭಾಗದ ಜನರು ಮೊದಲು ಮೈಸೂರಿಗೆ ಹೋಗುವ ಪರಿಪಾಠವಿತ್ತು. ಉತ್ತರ ಕರ್ನಾಟಕ ಸೇರಿದಂತೆ ‌ಮಹಾರಾಷ್ಟ್ರದ ಜನರು ಇಲ್ಲಿ ಬಂದ ಸಿಂಹಗಳನ್ನು ನೋಡಬಹುದಾಗಿದೆ. ಮುಂದೆ ಇದೊಂದು ಐತಿಹಾಸಿಕ ಪ್ರವಾದೋಧ್ಯಮ ತಾಣವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದರು.

ಮೊದಲ ಹಂತದಲ್ಲಿ‌ ಮೂರು ಸಿಂಹಗಳನ್ಬು ತರಲಾಗಿದೆ. ಹಂತ ಹಂತವಾಗಿ ಹುಲಿ, ಕರಡಿಯನ್ನು ತರಲಾಗುವುದು. ಈ ಪ್ರಾಣಿಗಳಿಗೆ ಕುಡಿಯುವ ನೀರಿನ ಸಲುವಾಗಿ ಮಾರ್ಕಂಡೇಯ ನದಿ ನೀರನ್ನು ತರಲು ಯೋಜನೆ ರೂಪಿಸಲಾಗಿದೆ. ಬೇಸಿಗೆಯ ಸಂದರ್ಭದಲ್ಲಿಯೂ ವ್ಯವಸ್ಥಿತವಾಗಿ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು.

ಎಲ್ಲ ಅಭಿವೃದ್ದಿ ಕಾರ್ಯವು ಪೂರ್ಣ ಹಂತದಲ್ಲಿದೆ. ಅಲ್ಲಿ ನೀರಿನ ವ್ಯವಸ್ಥೆಗಾಗಿ 4 ಕೋಟಿ ಹಣಕ್ಕಾಗಿ‌ ಸರಕಾಕ್ಕೆ ಮನವಿ ಮಾಡಿಕೊಳ್ಳಲಾಗುತ್ತಿದೆ ಎಂದರು.

ಮೈಸೂರು ಮೃಗಾಲಯದ ಮಾದರಿಯಲ್ಲಿ ಇದನ್ನು ಅಭಿವೃದ್ಧಿ ಪಡಿಸಲಾಗುವುದು. ಮೈಸೂರು ಮೃಗಾಲಯಕ್ಕಿನ ಹೆಚ್ಚಿನ ಪ್ರಮಾಣದಲ್ಲಿ ಜಾಗೆ ಭೂತರಾಮನಟ್ಟಿಯಲ್ಲಿದೆ ಎಂದು ಅವರು ಹೇಳಿದರು.

 

 

 

loading...