ಸತೀಶ ಜಾರಕಿಹೊಳಿ ಗೆಲವು ನಿಶ್ಚಿತ: ಶಾಸಕಿ ಹೆಬ್ಬಾಳ್ಕರ್

0
13

 

ಬೆಳಗಾವಿ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಬರೀ ತಮ್ಮ ಕ್ಷೇತ್ರಕ್ಕೆ ಸಿಮಿತವಾಗದೇ, ಇಡೀ ಜಿಲ್ಲೆಯಲ್ಲಿ ತಮ್ಮದೇ ಆದ ವೋಟ್ ಬ್ಯಾಂಕ್ ಹೊಂದಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 2014 ವಿಧಾನಸಭೆ ಚುನಾವಣೆ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆದಿದೆ, ಲೋಕಸಭಾ ಚುನಾವಣೆಯಲ್ಲಿ ಅವರು ಎಲ್ಲಿ ಪ್ರಚಾರ ಮಾಡು ಎಂದು ಹೇಳುತ್ತಾರೋ ಅಲ್ಲಿ ಹೋಗಿ ನಾನು ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತೇನೆ ಎಂದರು.

‘ಅಭ್ಯರ್ಥಿ ಹಾಗೂ ವಿಷಯದ ಮೇಲೆ ಚುನಾವಣೆ ಟರ್ನ್ ಆಗಲಿವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಲ್ಲರೂ ಒಪ್ಪುವಂತವರು. ಯಾವುದೇ ಸಮಾಜ, ಪಾರ್ಟಿಗಳಲ್ಲಿ, 25 ವರ್ಷಗಳಿಂದ ಒಳ್ಳೆಯ ಸಂಬಂಧ ಇಟ್ಟುಕೊಂಡು ಬಂದಿದ್ದಾರೆ. ತಮ್ಮ ಕ್ಷೇತ್ರಕ್ಕೆ ಅಷ್ಟೇ ಸೀಮಿತವಾಗದೇ, ಇಡೀ ಜಿಲ್ಲೆಯಲ್ಲಿ ತಮ್ಮದೇಯಾದ ವೋಟ್ ಬ್ಯಾಂಕ್ ಅನ್ನು ಹೊಂದಿದ್ದಾರೆ ‘ ಎಂದು ಹೇಳಿದರು.

ಲೋಕಸಭಾ ಚುನಾವಣೆ ಜಾತಿ, ಪಕ್ಷದ ಮೇಲೆ ನಡೆಯುವುದಿಲ್ಲ, ಅಭ್ಯರ್ಥಿಯ ಮೇಲೆ ನಡೆಯಲಿದೆ. ಬೆಳಗಾವಿ ಲೋಕಸಭಾ ಚುನಾವಣೆ ಸತೀಶ್ ಜಾರಕಿಹೊಳಿ ಅವರ ಮೇಲೆ ಹೋಗುತ್ತದೆ. ನಾವು ಕೂಡಾ ಅದೇ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಬಸವಕಲ್ಯಾಣ ಹಾಗೂ ಮಸ್ಕಿ ಕ್ಷೇತ್ರಕ್ಕೆ ಎರಡು ದಿನ ಪ್ರಚಾರಕ್ಕೆ ನಾನು ಮತ್ತು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಗೆ ತೆರಳುವಂತೆ ಹೇಳಿದ್ದಾರೆ. ಆದರೆ ನಮಗೆ ಮೊದಲು ಬೆಳಗಾವಿ ಲೋಸಭಾ ಕ್ಷೇತ್ರವನ್ನು ಗೆಲ್ಲಬೇಕಾಗಿದೆ. ಆದ್ದರಿಂದ ಇಲ್ಲಿ ನಮ್ಮ ಅವಶ್ಯಕತೆ ಹೆಚ್ಚಿರುವ ಕಾರಣದಿಂದ ಇಲ್ಲಿನ ಕಾರ್ಯಕ್ರಮಗಳನ್ನು ನೋಡಿಕೊಂಡು ಆ ಕ್ಷೇತ್ರಗಳಿಗೆ ಪ್ರಚಾರಕ್ಕೆ ತೆರಳುತ್ತೇವೆ ‘ ಎಂದು ತಿಳಿಸಿದರು.

loading...