ಶಾಸಕಿ ಹೆಬ್ಬಾಳ್ಕರ್ ನೆಲೆ…ಕಾಂಗ್ರೆಸ್ಸಿನ ಅಲೆ ಇದು ಸತೀಶ್ ವಿಜಯದ ಬಲೆ

0
90

 

ಬೆಳಗಾವಿ
ಶನಿವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಬಾವಿ ಗ್ರಾಮ ದೇವತೆ ಮಹಾಲಕ್ಷ್ಮಿ ದೇವಿಯ ಅಂಗಳದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಿತು.ಈ ಸಮಾವೇಶಕ್ಕೆ ಕಾಂಗ್ರೆಸ್ಸಿನ ದಿಗ್ಗಜ ನಾಯಕರು ಸಾಕ್ಷಿಯಾದರು.

ಬೆಳಗಾವಿ ಗ್ರಾಮೀಣ ಕ್ಷೇತ್ರ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್ಸಿನ ಈ ಸಮಾವೇಶ,ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಅಲೆ ಇದೆ ಅನ್ನೋದನ್ನು ಸಾಬೀತು ಮಾಡಿತು.

ಈ ಸಮಾವೇಶದಲ್ಲಿ,ರಾಜ್ಯ ಕಾಂಗ್ರೆಸ್ ಪ್ರಭಾರಿ ಸುರ್ಜಿವಾಲಾ, ಸಿದ್ರಾಮಯ್ಯ ಮಲ್ಲಿಕಾರ್ಜುನ್ ಖರ್ಗೆ,ಡಿ.ಕೆ ಶಿವಕುಮಾರ್,ಆರ್ ವ್ಹಿ ದೇಶಪಾಂಡೆ,ಎಂ.ಬಿ ಪಾಟೀಲ,ರಾಮಲಿಂಗಾರೆಡ್ಡಿ,ಸೇರಿದಂತೆ ಕಾಂಗ್ರೆಸ್ಸಿನ ಎಲ್ಲ ದಿಗ್ಗಜ ನಾಯಕರು ಪಾಲ್ಗೊಂಡಿದ್ದರು,ವೇದಿಕೆಯ ಎದುರು ಜನಸಾಗರವೇ ಸೇರಿತ್ತು .

ಆರಂಭದಲ್ಲಿ ಮೈಕ್ ಹಿಡಿದ ಮಾಜಿ ಸಿಎಂ ಸಿದ್ರಾಮಯ್ಯ,ಜನಸಾಗರ ನೋಡಿ ಭಾವುಕರಾದರು,ಲಕ್ಷ್ಮೀ ಹೆಬ್ಬಾಳಕರ ಗುಣಗಾನ ಮಾಡಿದ ಅವರು,ನಾನೂ ಯಾವಾಗಲೂ ಲಕ್ಷ್ಮೀ ಯನ್ನು ರಾಣಿ ಚನ್ನಮ್ಮ ಎಂದೇ ಕರೆಯುತ್ತೇನೆ.ಅವರು ಶಾಸಕಿಯಾದಾಗ ನಾನು ಮುಖ್ಯಮಂತ್ರಿ ಇರಲಿಲ್ಲ.ಲಕ್ಷ್ಮೀ ಹೆಬ್ಬಾಳಕರ ಹಠವಾದಿ,ಛಲಗಾರ್ತಿ,ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ,ಲಕ್ಷ್ಮೀ ಶಾಸಕಿಯಾಗಿದ್ದಾಗ ನಾನು ಮುಖ್ಯಮಂತ್ರಿ ಆಗಿದ್ದರೆ,ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಿದ್ದೆ,ಆದರೂ ಲಕ್ಷ್ಮೀ ಹೆಬ್ಬಾಳಕರ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿದ್ದಾರೆ.ಎಂದು ಸಿದ್ರಾಮಯ್ಯ ಲಕ್ಷ್ಮೀ ಹೆಬ್ಬಾಳಕರ ಅವರ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು.

ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 60 ಸಾವಿರ ಮತಗಳ ಲೀಡ್ ಸಿಗಬೇಕು ಈ ಕ್ಷೇತ್ರದ ಜನ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಆಶಿರ್ವಾದ ಮಾಡಿದಂತೆ,ಸತೀಶ್ ಜಾರಕಿಹೊಳಿ ಅವರಿಗೂ ಆಶಿರ್ವಾದ ಮಾಡಬೇಕು ಎಂದು ಸಿದ್ರಾಮಯ್ಯ ಮತದಾರರಲ್ಲಿ ಮನವಿ ಮಾಡಿಕೊಂಡರು.

loading...