ಬೆಳಗಾವಿಯಲ್ಲಿ ಪ್ರಚಾರ ನಡೆಸಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಕೊರೋನಾ ಪಾಸಿಟಿವ್

0
14

 

ಬೆಳಗಾವಿ
ಒಂದು ವಾರಗಳ ಕಾಲ ಬೆಳಗಾವಿಯಲ್ಲಿ ವಾಸ್ತವ್ಯ ಮಾಡಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸುತ್ತಾಡಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದ ಸಿಎಂ ಬಿ.ಎಸ್‌.ಯಡಿಯೂರಪ್ಪ ನವರಿಗೆ ಕೊರೋನಾ ಸೋಂಕು ತಗುಲಿದೆ ದೃಢಪಟ್ಟಿದೆ.

ಬುಧವಾರ ಸಂಜೆ ಬೆಳಗಾವಿಯಿಂದ ಬೆಂಗಳೂರಿಗೆ ತೆರಳಿದ್ದ ಯಡಿಯೂರಪ್ಪನವರು ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್- 19 ತಪಾಸಣೆ ನಡೆಸಿದ್ದು, ಅವರಿಗೆ ಸೋಂಕು ತಗುಲಿರುವುದು ದೃಢವಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಾರ್ಥವಾಗಿ ತೆರೆದ ವಾಹನದಲ್ಲಿ ನಡೆಸಲಾಗುತ್ತಿದ್ದ ರೋಡ್ ಶೋ ಅವನ್ನು ಅರ್ಧಕ್ಕೆ ಮೊಟಕುಗೊಳಿಸಿ ನಗರದ ಹೋಟೆಲ್‌ಗೆ ಮರಳಿ ವಿಶ್ರಾಂತಿ ಜತೆಗೆ ಚಿಕಿತ್ಸೆ ಪಡೆದರು.
ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರ ಪ್ರಚಾರಾರ್ಥ ಸಿಎಂ ರೋಡ್ ಶೋ ನಡೆಸುತ್ತಿದ್ದರು. ಬೆಳಗಾವಿಯ ದಕ್ಷಿಣ ವಿಧಾನಸಭೆ ಕ್ಷೇತ್ರದ ಶಿವಾಜಿ ಉದ್ಯಾನವನದಿಂದ ಆರಂಭವಾಗಿದ್ದ ರೋಡ್ ಶೋ ಮಹಾತ್ಮಪುಲೆ ರಸ್ತೆಯವರೆಗೆ ನಡೆಯಿತು. ಈ ವೇಳೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಮುಖ್ಯಮಂತ್ರಿ ಬಿಎಸ್‌ವೈ ಸುಸ್ತಾಗಿದ್ದರಿಂದ ರೋಡ್ ಶೋ ಮೊಟಕುಗೊಳಿಸಿ ಹೊಟೇಲ್‌ನತ್ತ ತೆರಳಿದರು. ಸಿಎಂ ಬಿ.ಎಸ್‌ಯಡಿಯೂರಪ್ಪಗೆ ಜ್ವರ, ಸುಸ್ತು, ನಿಶಕ್ತಿ ಹಿನ್ನೆಲೆ ಆರೋಗ್ಯ ತಪಾಸಣೆ ನಡೆಸಿರುವ ಖಾಸಗಿ ಆಸ್ಪತ್ರೆಯ ವೈದ್ಯರು, ವಿಶ್ರಾಂತಿಗೆ ಸಲಹೆ ನೀಡಿದ್ದರು.

ನಿರಂತರ ಪ್ರಚಾರದಿಂದ ಸುಸ್ತಾಗಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಬುಧವಾರವೂ ಜ್ಚರದ ನಡುವೆಯೂ ಮೂಡಲಗಿ, ಗೋಕಾಕ್‌ನಲ್ಲಿ ಪ್ರಚಾರ ನಡೆಸಿದ್ದರು. ಗುರುವಾರ ಬೆಳಗ್ಗೆ ಲಿಂಗಾಯತ ಮಠಗಳಿಗೆ ಭೇಟಿ ನೀಡಿದ ಬಳಿಕ ವಿಪರೀತ ಬಿಸಲಿನಲ್ಲೇ ರೋಡ್ ಶೋ ನಡೆಸಿದ್ದರು. ಈ ವೇಳೆ ಜ್ವರದಿಂದ ಬಳಲುತ್ತಿದ್ದ ಮುಖ್ಯಮಂತ್ರಿಗಳಿಗೆ ಸುಸ್ತು ಕಾಣಿಸಿಕೊಂಡಿದೆ, ತಕ್ಷಣ ರೋಡ ಶೋ ಅನ್ನು ಅರ್ಧಕ್ಕೆ ಮೊಟಕುಗೊಳಿಸಿ, ಹೋಟೆಲ್?ಗೆ ಆಗಮಿಸಿ ವಿಶ್ರಾಂತಿ ಪಡೆದರು. ನಂತರ ದಿ.ಸುರೇಶ್ ಅಂಗಡಿ ನಿವಾಸದಿಂದ ಮನೆ ಊಟ ತರಿಸಿದ ಮಾಡಿದ ಬಳಿಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಶಿವಾಜಿ ಉದ್ಯಾನವನದಿಂದ ಕಪಿಲೇಶ್ವರ ಮಂದಿರ, ಮಾಧ್ವಾ ರಸ್ತೆ ಮಾರ್ಗವಾಗಿ ಹಳೇ ಪಿಬಿ ರಸ್ತೆ, ಹಳೆ ಬೆಳಗಾವಿಯ ಹೊಸೂರು ಬಸವನ ಗಲ್ಲಿಯವರೆಗೂ ಸಿಎಂ ಬಿಎಸ್‌ವೈ ರೋಡ್ ಶೋನಲ್ಲಿ ಭಾಗಿಯಾಗಿದ್ದರು. ನಂತರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಜಗದೀಶ್ ಶೆಟ್ಟರ, ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ರೋಡ್ ಶೋ ಮುಂದುವರೆದಿತ್ತು. ಸದ್ಯ ಸಿಎಂ ಯಡಿಯೂರಪ್ಪನವರಿಗೆ ಕೋವಿಡ್ 19 ಸೋಂಕು ತಗುಲಿದ್ದು ಕಾರ್ಯಕರ್ತರು ಹಾಗೂ ನಾಯಕರಲ್ಲಿ ‌ಢವಢವ ಪ್ರಾರಂಭವಾಗಿದೆ.

 

 

 

 

 

loading...