ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ 54.02% ಮತದಾನ

0
98

ಬೆಳಗ್ಗೆ ನಿರುತ್ಸಾಹ – ಸಂಜೆಯ ವೇಳೆ ಹೆಚ್ಚಿನ ಮತದಾನ ಪ್ರಮಾಣ

ಬೆಳಗಾವಿ
ಓರ್ವ ಮಹಿಳಾ ಅಭ್ಯರ್ಥಿ 9 ಜನ ಪುರುಷ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ತೀವ್ರ ಕುತೂಹಲ ಮೂಡಿಸಿರುವ ಕೇಂದ್ರ ಸಚಿವ ಸುರೇಶ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಉಪುಚುನಾವಣಗೆ ಶನಿವಾರ ನಡೆದ ಸಮತದಾನ ಪ್ರಕ್ರಿಯೆ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳ ಮಧ್ಯೆ ಶಾಂತರೀತಿಯವಾಗಿ ನಡೆದಿದೆ. ಒಟ್ಟು 54.02 ಪ್ರತಿಶತ ಮತದಾನವಾಗಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇತಡಸಿ, ಚಿಕ್ಕತಡಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಮಲ್ಲಪ್ರಭಾ ನದಿಯ ಪ್ರವಾಹಪೀಡಿತ ಗ್ರಾಮಗಳ ಸ್ಥಳಾಂತರಕ್ಕೆ ಒತ್ತಾಯಿಸಿದರು. ಪ್ರವಾಹಪೀಡಿತ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ನಡೆಸಿದರು, 2500 ಜನ ಮತದಾನ ಮಾಡಲು ನಕಾರ್ ಮಾಡಿದ ಘಟನೆ ಹೊರೆತು ಪಡಿಸಿದಂತೆ ಯವುದೇ ಅಹೀತಕರ ಘಟನೆ ಜರುಗದೆ ಬೆಳಗಾವಿ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಶೇ. 54.02 ರಷ್ಟು ಮತದಾನವಾಗಿದೆ.
ಶನಿವಾರ ಮುಂಜಾನೆ 7 ಗಂಟೆಯಿAದ ಆರಂಭವಾದ ಮತದಾನಕ್ಕೆ ಗ್ರಾಮೀಣ ಪ್ರದೇಶದ ಜನರು ಹೆಚ್ಚಿನ ಉತ್ಸಾಹ ತೋರಿದ್ದು, ನಗರ ಪ್ರದೇಶಗಳ ಮತದಾರರು ಮತದಾನಕ್ಕೆ ನೀರುತ್ಸಾರನ ತೋರಿದ್ದು ಕಂಡು ಬಂದಿತ್ತು. ಗ್ರಾಮೀಣ ಪ್ರದೇಶದಲ್ಲಿ ಜನ ಸುಡು ಬಿಸಿಲು ಲಕೆಕ್ಕಿಸದೆ ಮತದಾನಕ್ಕೆ ಕುಟುಂಬ ಸಮೇತ ಆಗಮಿಸುವ ದೃಶ್ಯ ಸಾಮಾನ್ಯವಾಗಿತ್ತು.
ಬಿಜೆಪಿ ಮಂಗಲಾ ಅಂಗಡಿ ಅವರು ಶನಿವಾರ ಮುಂಜಾನೆ ತಮ್ಮ ಇಬ್ಬರೂ ಸುಪುತ್ರಿಯರಾದ ಡಾ. ಸ್ಪೂರ್ತಿ ಪಾಟೀಲ ಹಾಗೂ ಶೃದ್ಧಾ ಶೆಟ್ಟರ್ ಜೊತೆಗೆ ಬೆಳಗಾವಿಯ ವಿಶೇಶ್ವರಯ್ಯ ನಗರದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತಚಲಾವಣೆ ಮಾಡಿದರು ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಗೋಕಾಕ ನಗರದಲ್ಲಿ ತಮ್ಮ ಮತಚಲಾವಣೆ ನಡೆಸಿದರು.
ಲೋಕಸಭಾ ಉಪಚುನಾವಣೆಯ 10 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಮತಪೆಟ್ಟಿಗೆಯಲ್ಲಿ ಭದ್ರಪಡಿಸಿದ್ದು, ಮತ ಏಣಿಕೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲ್ಲಿದೆ.
============================
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇತಡಸಿ, ಚಿಕ್ಕತಡಸಿ ಎರಡು ಗ್ರಾಮಗಳ ಪೈಕಿ 2500 ಅಧಿಕ ಜನರು ಮತದಾನ ಬಹಿಷ್ಕಾರ ಹಾಕಿದರು. ಗ್ರಾಮಸ್ಥರ ಬೇಡಿಕೆ ಆಲಿಸಲು ಮುಂದಾಗದ ಅಧಿಕಾರಿಗಳು, ಇದರಿಂದ ಇನ್ನಷ್ಟು ಕೆರಳಿದ ಗ್ರಾಮಸ್ಥರು ಅಧಿಕಾರಿಗಳ ಧೋರಣೆ ಖಂಡಿಸಿ, ಬೇಡಿಕೆ ಸ್ಪಂದನೆವರಿಗೂ ಮತದಾನ ಮಾಡದಿರಲು ಗ್ರಾಮಸ್ಥರು ಪಟ್ಟು ಹಿಡಿದುರುವ ದೃಶ್ಯಗಳು ಕಂಡು ಬಂದವು.
===========================

ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಮುಂಜಾನೆಯಿAದಲೇ ಮತದಾರ ನೀರುತ್ಸಾರ ತೋರಿದ ಘಟನೆ ನಡೆಯಿತು. ಮುಂಜಾನೆ 7 ಆರಂಭವಾದ ಮತದಾನ ಸಂಜೆ7 ಗಂಟೆಯವರೆಗೆ ಶೇ. 54.02 ಮತದಾನವಾಗಿದೆ.

———————–
ಬೆಳಗಾವಿ ಗ್ರಾಮೀಣ-58.36%
ಬೆಳಗಾವಿ ಉತ್ತರ-42/88%
ಬೆಳಗಾವಿ ದಕ್ಷಿಣ-44.84
ಬೈಲಹೊಂಗಲ 58 %
ಸವದತ್ತಿ- 58.67 %
ಗೋಕಾಕ್ -60.47%

ರಾಮದುರ್ಗ 55.67 %

ಅರಭಾಂವಿ-55.07%

ಒಟ್ಟು ಮತದಾನ- 54.02

loading...