ರಾಜ್ಯ ಸರಕಾರದ ಮೇಲೆ ಲಾಕ್ ಡೌನ್ ಭವಿಷ್ಯ..! ಮೋದಿ

0
12
The Prime Minister, Shri Narendra Modi addressing at the webinar for effective implementation of Union Budget in Defence Sector, in New Delhi on February 22, 2021.
The Prime Minister, Shri Narendra Modi addressing at the webinar for effective implementation of Union Budget in Defence Sector, in New Delhi on February 22, 2021.

 

ಬೆಳಗಾವಿ
ಕೊರೊನಾ ಸೋಂಕಿನ ವಿರುದ್ಧ ದೇಶ ಅತಿದೊಡ್ಡ ಹೋರಾಟ ನಡೆಸುತ್ತಿದೆ. ಕೋರೋನಾ ಎರಡನೇ ಅಲೆ ತೂಫಾನ್ ರೀತಿ ಬಂದೊದಗಿದ್ದು, ಜನರು ಮತ್ತೊಂದು ರೀತಿಯ ಹೋರಾಟ ನಡೆಸುಬೇಕಾದ ಸ್ಥಿತಿ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಗಳ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊರೊನ ಎರಡನೇ ಅಲೆ ಆತಂಕದ ಅಲೆ ಎಬ್ಬಿಸಿದೆ. ದೇಶದ ಜನರ ಪ್ರಾಣ ರಕ್ಷಿಸಲು ಹಗಲಿರುಳು ಶ್ರಮಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಪ್ಯಾರಾಮೆಡಿಕಲ್, ಪೊಲೀಸ, ಸಫಾಯಿ ಕರ್ಮಚಾರಿಗಳು ಎಲ್ಲರಿಗೂ ಧನ್ಯವಾದಗಳು. ಕೋವಿಡ್ ನಿಂದ ಹಲವರು ಮೃತಪಟ್ಟಿದ್ದಾರೆ. ಅವರ ಕುಟುಂಬದ ದು:ಖದಲ್ಲಿ ಅವರ ಕುಟುಂಬ ಸದಸ್ಯರಲ್ಲಿ ಒಬ್ಬನಾಗಿ ಭಾಗಿಯಾಗುತ್ತೇನೆ ಎಂದರು.

ದೇಶದಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ಆಕ್ಸಿಜನ್ ಉತ್ಪಾದನೆ, ಪೂರೈಕೆ ಹಾಗೂ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ನೀಗಿಸಲು ಕ್ರಮಕೈಗೊಳ್ಳಲಾಗಿದೆ. ದೇಶದಲ್ಲಿ ವ್ಯಾಕ್ಸಿನ್ ಉತ್ಪಾದನೆ ಹೆಚ್ಚಿಸಲಾಗಿದೆ. ಜನವರಿ, ಫೆಬ್ರವರಿಯಲಿಯೇ ಲಸಿಕೆ ಉತ್ಪಾದನೆ ಹೆಚ್ಚಿಸಲಾಗಿದೆ ಭಾರತದಲ್ಲಿ ಅತಿ ಕಡಿಮೆ ದರದಲ್ಲಿ ಲಸಿಕೆ ಲಭ್ಯವಾಗಲಿದೆ. ವಿಶ್ವದಲ್ಲೇ ವೇಗವಾಗಿ ಭಾರತದಲ್ಲಿ ಲಸಿಕೆ ನೀಡಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ ಎಂದರು.

ಕಳೆದ ಬಾರಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ಕಳೆದ ಬಾರಿಗಿಂತ ಈಬಾರಿ ಪರಿಸ್ಥಿತಿ ಭಿನ್ನವಾಗಿದೆ. ಯಾವುದೇ ಕಾರಣಕ್ಕೂ ಜನರು ಆತಂಕಕ್ಕೀಡಾಗಿ ಗುಳೆ ಹೋಗುವ ಕೆಲಸ ಮಾಡಬೇಡಿ. ದೇಶದ ಪ್ರತಿ ಸ್ಥಳಗಳಲ್ಲೂ ವ್ಯಾಕ್ಸಿನ್ ಲಭ್ಯವಾಗುತ್ತದೆ. ಜನರಿಗೆ ಲಸಿಕೆ ಹಾಗೂ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ. ಧೈರ್ಯಂ ಸರ್ವತ್ರ ಸಾಧನಂ ಹಾಗಾಗಿ ಕೊರೊನಾ ಮಹಾಮಾರಿಯನ್ನು ನಾವು ಹಿಮ್ಮೆಟ್ಟಿಸಬೇಕಿದೆ. ದೇಶವನ್ನು ಲಾಕ್ ಡೌನ್ ನಿಂದ ರಕ್ಷಿಸಬೇಕಿದೆ. ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಕರೆ ನೀಡಿದರು.

ಇದೇ ವೇಳೆ ಲಾಕ್ ಡೌನ್ ಕೊನೇಯ ಅಸ್ತ್ರವನ್ನಾಗಿ ಮಾತ್ರ ಬಳಸಿ. ಲಾಕ್ ಡೌನ್ ಜಾರಿಮಾಡದೇ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನಿಸಿ, ಮೈಕ್ರೋ ಕಂಟೇನ್ಮೆಂಟ್ ಝೋನ್ ಗಳಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಎಲ್ಲಾ ರಾಜ್ಯಗಳಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು.

 

loading...